ಮತ್ತೆ ಸಲ್ಮಾನ್ ಖಾನ್ ಜೊತೆ ನಟಿಸಲು ಆಗಲ್ಲ ಎಂದ ಸ್ಟಾರ್ ನಟಿ..!!

ಸಿನಿಮಾ ಅಂದ ಮೇಲೆ ನಟ ನಟಿಯರ ಕೆಮಿಸ್ಟ್ರಿ ತುಂಬಾ ಮುಖ್ಯವಾಗುತ್ತದೆ.. ಇಬ್ಬರನ್ನು ಒಂದೇ ತೆರೆ ಮೇಲೆ ನೋಡುತ್ತಿದ್ದರೆ ನೈಸ್ ಪೇರ್ ಎನ್ನುವಂತಿರಬೇಕು.. ಕೆಲವು ನಟ ನಟಿಯರ ಮಧ್ಯೆ ವಯಸ್ಸಿನ ಅಂತರ ತುಂಬಾ ಇರುತ್ತದೆ…ಆದರೂ ತೆರೆ ಮೇಲೆ ಮ್ಯಾನೇಜ್ ಆಗುವಂತೆ ನಟನೆ ಮಾಡುತ್ತಾರೆ.. ಇದೇ ರೀತಿಯಾಗಿ ಇನ್ನು ಮುಂದೆ ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡಲ್ಲ ಎಂದು ನಟಿಯೊಬ್ಬಳು ಹೇಳಿದ್ದಾಳೆ. ನನಗೆ ಮತ್ತೆ ಸಲ್ಮಾನ್ ಖಾನ್ ಅವರ ಜೊತೆ ನಟಿಸುವುದಕ್ಕೆ ಆಗಲ್ಲ ಎಂದು ಬಾಲಿವುಡ್ ನಟಿ ದಿಶಾ ಪಠಾಣಿ ತಿಳಿಸಿದ್ದಾರೆ.. ಸಲ್ಮಾನ್ ಖಾನ್ ಅವರ ಮುಂಬರುವ ‘ಭಾರತ್’ ಸಿನಿಮಾದಲ್ಲಿ ದಿಶಾ ಪಠಾಣಿ ಟ್ರಾಪಿಜಿ ಕಲಾವಿದೆ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ದಿಶಾ ಮೊದಲ ಬಾರಿಗೆ ಸಲ್ಮಾನ್ ಅವರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದು, ಇಬ್ಬರ ಕೆಮೆಸ್ಟ್ರಿ ಹೇಗಿದೆ ಎಂದು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇತ್ತೀಚೆಗೆ ದಿಶಾ ಪಠಾಣಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ ದಿಶಾ, ವಯಸ್ಸಿನ ಅಂತರ ಇರುವ ಕಾರಣ ನನಗೆ ಸಲ್ಮಾನ್ ಖಾನ್ ಅವರ ಜೊತೆ ನಟಿಸಲು ಮತ್ತೆ ಅವಕಾಶ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ… ವಯಸ್ಸಿನ ಅಂತರ ಇರುವುದರಿಂದ ನನಗೆ ಇನ್ನೂ ಮುಂದೆ ಅವರ ಜೊತೆ ನಟಿಸಲು ಅವಕಾಶ ಸಿಗುವುದಿಲ್ಲ ಅನ್ನಿಸುತ್ತದೆ ಎಂದಿದ್ದಾರೆ. ಭಾರತ್ ಚಿತ್ರದಲ್ಲಿ ಸಲ್ಮಾನ್ ಅವರನ್ನು 20-30 ವರ್ಷದವರಂತೆ ತೋರಿಸಲಾಗುತ್ತೆ ಎಂದು ಹೇಳಲಾಗಿತ್ತು. ಆಗ ನಾನು ನಮ್ಮಿಬ್ಬರ ಜೋಡಿ ಮ್ಯಾಚ್ ಆಗುತ್ತೆ ಎಂದು ತಕ್ಷಣ ಸಿನಿಮಾವನ್ನು ಒಪ್ಪಿಕೊಂಡೆ. ಸಲ್ಮಾನ್ ಹಾರ್ಡ್ ವರ್ಕರ್ ಆಗಿದ್ದು, ನಾನು ಅವರಿಂದ ಹೆಚ್ಚು ಕಲಿತ್ತಿದ್ದೇನೆ ಎಂದು ದಿಶಾ ಪಠಾಣಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ವಯಸ್ಸಿನ ಅಂತರ ಸಿನಿಮಾ ರಂಗದಲ್ಲಿಯೂ ಕೂಡ ಅಡ್ಡಿಯಾಗುತ್ತದೆ.
Comments