ಸುಮಲತಾ ಅಂಬರೀಶ್ ಗೆದ್ದ ಖುಷಿಗೆ ದರ್ಶನ್ ಅಭಿಮಾನಿ ಮಾಡಿದ್ದೇನು ಗೊತ್ತಾ..?

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಅಖಾಡ ಸದ್ದು ಮಾಡಿದಷ್ಟು ಮತ್ಯಾವ ಅಖಾಡವೂ ಕೂಡ ಸದ್ದು ಮಾಡಿಲ್ಲ… ಫಲಿತಾಂಶ ಬಂದ ಮೇಲೂ ಕೂಡ ಅಷ್ಟೆ ಸುದ್ದಿಯಲ್ಲಿದೆ. ಮಂಡ್ಯ ಲೋಕಸಭಾ ಚುನಾವಣೆಗೆ ದೋಸ್ತಿ ಪರವಾಗಿ ನಿಖಿಲ್ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಖಾಡಕ್ಕೆ ಇಳಿದಿದ್ದರು. ಸುಮಲತಾ ಪರ ಸ್ಯಾಂಡಲ್ ವುಡ್ ನ ಸ್ಟಾರ್ಸ್ ಗಳು ಕ್ಯಾಂಪೇನ್ ಮಾಡಿದ್ದರು.. ಮೊನ್ನೆ ಮೊನ್ನೆ ಬಂದ ಫಲಿತಾಂಶದಲ್ಲಿ ಸುಮಲತಾ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸದ್ಯ ಸಂಭ್ರಮದಲ್ಲಿ ಇದ್ದಾರೆ.
ಸುಮಲತಾ ಅಂಬರೀಶ್ ಅವರ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಜೋಡೆತ್ತುಗಳಂತೆ ಮಂಡ್ಯ ಕ್ಷೇತ್ರದಾದ್ಯಂತ ಬಿಡುವಿಲ್ಲದೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಇವರುಗಳ ಶ್ರಮಕ್ಕೆ ಪ್ರತಿಫಲವೆಂಬಂತೆ ಸುಮಲತಾ ಅಂಬರೀಶ್ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಸುಮಲತಾ ಅವರ ಈ ಗೆಲುವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಟ್ಟಾ ಅಭಿಮಾನಿಯಾಗಿರುವ ರಾಮನಗರ ತಾಲೂಕಿನ ಕರೇನಹಳ್ಳಿ ಗ್ರಾಮದ ಕಾರ್ತಿಕ್ ಎಂಬವರು ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ತಮ್ಮ ಬೆನ್ನಿನ ಮೇಲೆ ದರ್ಶನ್ ಅವರ ರಾಯಣ್ಣ ಗೆಟಪ್ ನ ಚಿತ್ರದ ಟ್ಯಾಟೂವನ್ನು ಹಾಕಿಸಿಕೊಂಡಿದ್ದು, ಸುಮಲತಾ ಅವರ ಗೆಲುವಿಗೆ ದರ್ಶನ್ ಕಾರಣವಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ಈ ರೀತಿ ಟ್ಯಾಟೂ ಹಾಕಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.. ಜೆಡಿಎಸ್ ನ ಭದ್ರ ಕೋಟೆಯಲ್ಲಿಯೇ ಜೆಡಿಎಸ್ ಗೆ ಸೋಲು ಉಂಟಾಗಿರುವುದು ನಿಜಕ್ಕೂ ಆಶ್ಚರ್ಯವೇ ಸರಿ.. ಅಭಿಮಾನಿಗಳು ತಮ್ಮ ತಮ್ಮ ಅಭಿಮಾನವನ್ನು ಯಾವೆಲ್ಲಾ ರೀತಿಯಲ್ಲಿ ತೋರಿಸುತ್ತಾರೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ ಎನ್ನಬಹುದು…
Comments