ಯಾರ ಜೊತೆ ಮಲಗಬೇಕೆಂದು ಕಲಾವಿದರಿಗೆ ಸಲಹೆ ನೀಡ್ತಾರಂತೆ ಈ ಸ್ಟಾರ್ ಹೀರೋ..!!
ಸಿನಿಮಾ ಅಂದ ಮೇಲೆ ಆರೋಪಗಳು ಪ್ರತ್ಯಾರೋಪಗಳು ಕೇಳಿ ಬರುತ್ತಲೇ ಇರುತ್ತವೆ..ಸಾಕಷ್ಟು ಸೆಲಬ್ರೆಟಿಗಳು ಕೂಡ ಇದಕ್ಕೇನು ಹೊರತಾಗಿಲ್ಲ...ಇದೀಗ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಮೇಲೆ ಕಂಗನಾ ರಣಾವತ್ ಆರೋಪ ಮಾಡಿದ್ದರು. ಈ ಆರೋಪ ಅನೇಕ ರೀತಿಯ ಚರ್ಚೆಗೆ ಇದೀಗ ಕಾರಣವಾಗಿದೆ.. ಕರಣ್ ಜೋಹಾರ್ ಮತ್ತು ಕಂಗನಾ ರಣಾವತ್ ನಡುವೆ ನಡೆದಿದ್ದ ಗಲಾಟೆ ಸ್ವಲ್ಪ ಮಟ್ಟಿಗೆ ತಣ್ಣಗೆ ಆಗಿತ್ತು.. . ಆದರೆ ಇದೀಗ ರಣಾವತ್ ಕುಟುಂಬದ ಇನ್ನೊಬ್ಬರು ಕರಣ್ ಜೋಹರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಹೌದು..ಕಂಗನಾ ಸಹೋದರಿ ರಂಗೋಲಿ ಕರಣ್ ಜೋಹರ್ ವಿರುದ್ಧ ಟ್ವಿಟ್ ಮಾಡಿದ್ದಾರೆ. ಈ ಟ್ವಿಟ್ ಮತ್ತೊಮ್ಮೆ ಯುದ್ಧ ಶುರು ಮಾಡುವಂತೆ ಕಾಣುತ್ತಿದೆ... ಕಮಲ್ ಆರ್.ಖಾನ್ ಟ್ವೀಟರ್ ಗೆ ರಂಗೋಲಿ ನೀಡಿರುವ ಪ್ರತಿಕ್ರಿಯೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಧರ್ಮ ಪ್ರೊಡಕ್ಷನ್ ನಿಂದ ಇಶಾನ್ ಖಟ್ಟರ್ ಹೊರ ಬಿದ್ದಿದ್ದಾರೆ. ಅವರಿಗೆ ಯಾವುದೇ ಚಿತ್ರ ಸಿಕ್ಕಿಲ್ಲವೆಂದು ಖಾನ್ ಟ್ವಿಟ್ ಮಾಡಿದ್ದಾರೆ..ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಂಗೋಲಿ, ಕರಣ್ ಜೋಹರ್, ಲಾಂಚ್ ಮಾಡಿದ ಕಲಾವಿದರಿಂದ ಹಣ ಮಾತ್ರ ಪಡೆಯುವುದಿಲ್ಲ, ಅವರು ಯಾವ ಡ್ರೆಸ್ ಧರಿಸಬೇಕು, ಯಾರ ಜೊತೆ ಮಲಗಬೇಕು ಎಂಬುದನ್ನೂ ಹೇಳ್ತಾರೆಂದು ರಂಗೋಲಿ ಟ್ವಿಟ್ ಮಾಡಿದ್ದಾರೆ. ಈ ಟ್ವೀಟ್ ಬಾರಿ ಚರ್ಚೆಗೆ ಕಾರಣವಾಗಿದೆ. ಚಿತ್ರರಂಗದಲ್ಲಿ ಸಾಕಷ್ಟು ರೀತಿಯೆ ಬೆಳವಣಿಗೆಗಳು ಆಗುತ್ತಿವೆ... ಅಷ್ಟೆ ಅಲ್ಲದೆ ಕೆಲವೊಂದು ವಿಷಯಗಳು ಬಾರೀ ಚರ್ಚೆಗೆ ಕಾರಣವಾಗಿ ಬಿಡುತ್ತವೆ..
Comments