ಪುಟ್ಟಗೌರಿ ಮದುವೆಯ ಮಹೇಶನ ಬಾಳಿಗೆ ಎಂಟ್ರಿ ಕೊಟ್ಟ ರಿಯಲ್ ಗೌರಿ..!!
ಇತ್ತಿಚಿಗೆ ಸೆಲಬ್ರೆಟಿಗಳ ಮದುವೆಯ ಪರ್ವ ಜೋರಾಗಿಯೇ ನಡೆಯುತ್ತಿದೆ. ಸಾಕಷ್ಟು ಸಿನಿಮಾ ತಾರೆಯರು,ಕಿರುತೆರೆ ನಟ ನಟಿಯರು ಬ್ಯಾಚುಲರ್ ಲೈಫ್ ಗೆ ಗುಡ್ ಬಾಯ್ ಹೇಳಿ ಸಪ್ತ ಪದಿ ತುಳಿಯಲು ಮುಂದಾಗುತ್ತಿದ್ದಾರೆ.. ಕುಲವಧು ಖ್ಯಾತಿಯ ವಚನ ಕೂಡ ಮದುವೆಯಾಗಿದ್ದಾರೆ.. ಹಾಗೂ ಧನ್ಯ ಕೂಡ ಪ್ರೀತಿಸಿದ ಹುಡುಗನ ಕೈ ಹಿಡಿಯುತ್ತಿದ್ದಾಳೆ.. ಇನ್ನೂ ಪುಟ್ಟಗೌರಿ ಮದುವೆ ಖ್ಯಾತಿಯ ಮಹೇಶ ಅಲಿಯಾಸ್ ರಕ್ಷಿತ್ ಕೂಡ ಬ್ಯಾಚುಲರ್ ಲೈಫ್ ಗೆ ಗುಡ್ ಬಾಯ್ ಹೇಳಿದ್ದಾರೆ.
ಎಸ್.. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ರಕ್ಷಿತ್ ಅವರು ಮಹೇಶ್ ಪಾತ್ರ ಮಾಡಿದ್ದು, ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.. ನಟ ರಕ್ಷಿತ್ ಅವರು ಇದೇ 26 ರಂದು ಅಂದರೆ ಭಾನುವಾರ ಅನುಷಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ ರಕ್ಷಿತ್ ಇನ್‍ಸ್ಟಾಗ್ರಾಮ್ ನಲ್ಲಿ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಪೋಸ್ಟ್ ಮಾಡುವ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ. ನಾನು ಮದುವೆಯಾಗುತ್ತಿದ್ದೇವೆ. ಇದು ನನ್ನ ಪ್ರೀತಿಯ ಜನರಿಗೆ ಮದುವೆಯ ಆಮಂತ್ರಣ ಪತ್ರಿಕೆಯಾಗಿದೆ. ಇದೇ ತಿಂಗಳ ದಿನಾಂಕ 26ರಂದು ನನ್ನ ವಿವಾಹ ಇದೆ. ನೀವೆಲ್ಲರೂ ಬಂದು ಆಶೀರ್ವಾದಿಸಬೇಕು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಕೆಲವು ತಿಂಗಳುಗಳ ಹಿಂದೆ ರಕ್ಷಿತ್ ಅವರು ರಕ್ಷ್ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದರು.
Comments