ಅಭಿಮಾನಿಗಳಿಗೆ ಯಶ್ ಇದಕ್ಕೆ ಇಷ್ಟ ಆಗೋದು..!!

ಸ್ಯಾಂಡಲ್ ವುಡ್ ಸ್ಟಾರ್ಗಳು ಅಭಿಮಾನಿಗಳಿಗೆ ಹತ್ತಿರವಾಗುವುದು ತುಂಬಾ ಕಷ್ಟದ ಕೆಲಸ.. ಅಭಿಮಾನಿಗಳು ಎಲ್ಲಾ ಸ್ಟಾರ್ ನಟ ನಟಿಯರನ್ನು ಒಪ್ಪಿಕೊಳ್ಳುವುದಿಲ್ಲ….. ಚಂದನವನದ ಕೆಲವು ನಟ ನಟಿಯರು ನಟನೆಯ ಜೊತೆಗೆ ಸಾಮಾಜಿಕ ಕಾರ್ಯಗಳನ್ನು ಕೂಡ ಮಾಡುತ್ತಿರುತ್ತಾರೆ… ಅದೇ ಸಾಲಿಗೆ ನಟ ರಾಕಿಂಗ್ ಸ್ಟಾರ್ ಯಶ್ ಕೂಡ ಸೇರಿಕೊಳ್ಳುತ್ತಾರೆ.. ಕೇವಲ ನಟನೆ ಮಾತ್ರವಲ್ಲದೇ, ಸಾಮಾಜಿಕ ಕಾರ್ಯಗಳ ಮೂಲಕವು ಕೂಡ ಯಶ್ ಗಮನ ಸೆಳೆದಿದ್ದಾರೆ.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕಳೆದ ಬಾರಿ ಕುಡಿಯುವ ನೀರಿನ ಸಮಸ್ಯೆ ತೀವ್ರತರವಾಗಿರುವುದನ್ನು ಮನಗಂಡ ಅವರು, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದ್ದರು. ಅಲ್ಲದೆ, ಕೆರೆ ಅಭಿವೃದ್ಧಿಪಡಿಸಿದ್ದು, ಹತ್ತಾರು ಹಳ್ಳಿಗಳಿಗೆ ಅನುಕೂಲವಾಗಿದೆ. ಜಾನುವಾರುಗಳಿಗೆ ಮೇವು ಪೂರೈಕೆಗೂ ಕೂಡ ಯಶ್ ಅವರು ವ್ಯವಸ್ಥೆ ಮಾಡಿದ್ದರು. ರಾಯಚೂರು ಜಿಲ್ಲೆಯಲ್ಲಿ ಬರದ ತೀವ್ರತೆಯಿಂದಾಗಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. ಇದನ್ನು ಮನಗಂಡ ಯಶ್, ಯಶೋಮಾರ್ಗ ಮೂಲಕ ರಾಯಚೂರು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ. ಗ್ರಾಮಗಳಲ್ಲಿ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದ್ದು, ಅವರ ಈ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ..ಕೇವಲ ರೀಲ್ ಲೈಫ್ ನಲ್ಲಿ ಹೀರೋ ಆದರೆ ಸಾಲದು… ರಿಯಲ್ ಲೈಫ್ ನಲ್ಲಿಯೂ ಕೂಡ ಹೀರೋ ಆಗಬೇಕು.. ಯಶ್ ಯಶೋಮಾರ್ಗದ ಮೂಲಕ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ..
Comments