ಕುರುಕ್ಷೇತ್ರ ಸಿನಿಮಾಗಾಗಿ ಈ ಸ್ಟಾರ್ ನಟ ಒಂದು ನಯಾ ಪೈಸೆಯನ್ನು ಪಡೆದಿಲ್ಲವಂತೆ..!!

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾವಾದ ಕುರುಕ್ಷೇತ್ರ ಸಿನಿಮಾದ ಬಿಡುಗಡೆಗೆ ಈಗಾಗಲೇ ಮೂಹೂರ್ತ ಫಿಕ್ಸ್ ಆಗಿದೆ.. ದರ್ಶನ್ ಅಭಿಮಾನಿಗಳು ಕುರುಕ್ಷೇತ್ರ ಸಿನಿಮಾಗಾಗಿ ಕಾಯುತ್ತಿದ್ದರೆ.. ಮೊನ್ನೆ ಮೊನ್ನೆಯಷ್ಟೆ ಕುರುಕ್ಷೇತ್ರ ಸಿನಿಮಾದ ಮತ್ತೊಂದು ಟೀಸರ್ ಬಿಡುಗಡೆಯಾಗಿದೆ.. ಟೀಸರ್’ನಲ್ಲಿ ಒಂದಷ್ಟು ಪಾತ್ರಗಳು ರಿವೀಲ್ ಆಗಿವೆ…ಮುನಿರತ್ನ ನಿರ್ಮಾಣದ ದರ್ಶನ್, ನಿಖಿಲ್ ಕುಮಾರ ಸ್ವಾಮಿ ಮುಖ್ಯಭೂಮಿಕೆಯಲ್ಲಿರುವ ಕುರುಕ್ಷೇತ್ರ ಸಿನಿಮಾ ಬಿಡುಗಡೆ ಸಿದ್ಧವಾಗಿದೆ.
ಕುರುಕ್ಷೇತ್ರ ಸಿನಿಮಾ ರೆಬಲ್ ಸ್ಟಾರ್ ಅಂಬರೀಶ್ ಅವರ ಕೊನೆಯ ಚಿತ್ರವಾಗಿದೆ. ಆ ಸಿನಿಮಾದಲ್ಲಿ ನಟಿಸಲು ಅಂಬರೀಶ್ ಹಣವನ್ನು ಸಂಭಾವನೆ ತೆಗೆದುಕೊಂಡಿರಲಿಲ್ಲವಂತೆ. ಈ ವಿಚಾರವನ್ನು ಸ್ವತಃ ಮುನಿರತ್ನ ಬಹಿರಂಗಪಡಿಸಿದ್ದಾರೆ. ಅಂಬರೀಶ್ ಗೆ ಭೀಷ್ಮನ ಪಾತ್ರ ಮಾಡಲು ಹೇಳಿದಾಗ ಆರಂಭದಲ್ಲಿ ಅವರು ಒಪ್ಪಲಿಲ್ಲವಂತೆ. ನಂತರ ಒತ್ತಾಯ ಮಾಡಿದಾಗ ಒಪ್ಪಿದರು. ಸುಮಾರು 15 ರಿಂದ 20 ದಿನ ಶೂಟಿಂಗ್ ನಲ್ಲಿ ಪಾಲ್ಗೊಂಡರು. ನಂತರ ಎರಡೇ ದಿನದಲ್ಲಿ ತಮ್ಮ ಡಬ್ಬಿಂಗ್ ಅನ್ನೂ ಕೂಡ ಮುಗಿಸಿಕೊಟ್ಟರು. ಆದರೆ ಇದಕ್ಕೆ ಸಂಭಾವನೆಯನ್ನೇ ಪಡೆದಿರಲಿಲ್ಲ ಎಂದು ಮುನಿರತ್ನ ತಿಳಿಸಿದ್ದಾರೆ. ಅಂಬರೀಶ್ ಅಭಿನಯದ ಕೊನೆಯ ಚಿತ್ರ ಇದಾಗಿದ್ದು ಅಭಿಮಾನಿಗಳು ಸಿನಿಮಾವನ್ನು ನೋಡಲು ಕಾಯುತ್ತಿದ್ದರೆ..ಅತೀಶೀಘ್ರದಲ್ಲಿಯೆ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಮಾಡಲಿದ್ದಾರೆ.
Comments