ಮತ್ತೊಬ್ಬ ಸ್ಟಾರ್ ನಟನ ದಾಂಪತ್ಯ ಬದುಕು ಅಂತ್ಯ..!!

ಇತ್ತಿಚಿಗೆ ಮದುವೆ, ಲವ್, ಬ್ರೇಕ್ಅಪ್ ಎಲ್ಲವೂ ಕೂಡ ಕಾಮನ್ ಆಗಿ ಬಿಟ್ಟಿವೆ.. ಅದರಲ್ಲೂ ಸೆಲಬ್ರೆಟಿಗಳಂತೂ ಈ ವಿಷಯದಲ್ಲಿ ಸದಾ ಮುಂದಿರುತ್ತಾರೆ… ಸೆಲೆಬ್ರಿಟಿಗಳಲ್ಲಿ ಲವ್, ಮದುವೆ, ಬ್ರೇಕ್ ಅಪ್ ಎಲ್ಲವೂ ಕೂಡ ಸಾಮಾನ್ಯವಾಗಿರುತ್ತವೆ.. ಇದೀಗ ಬಾಲಿವುಡ್ ನಲ್ಲಿ ಒಂದು ಕಾಲದಲ್ಲಿ ಹುಡುಗಿಯರ ಫೇವರಿಟ್ ಆಗಿದ್ದ ಇಮ್ರಾನ್ ಖಾನ್ ದಾಂಪತ್ಯ ಬದುಕು ಸದ್ಯ ಅಂತ್ಯ ಕಂಡಿದೆ ಎಂದೇ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ.
ಎಲ್ಲರಿಗೂ ಇಮ್ರಾನ್ ಖಾನ್ ಎಂದರೆ ತಕ್ಷಣ ನೆನಪಿಗೆ ಬರುವುದು ಜಾನೇ ತೂ ಯಾ ಜಾನೇ ಮನ್ ಸಿನಿಮಾ.. ಈ ಸಿನಿಮಾ ಸೂಪರ್ ಹಿಟ್ ಆದ ಕಾರಣ ಇಮ್ರಾನ್ ಖಾನ್ ಹುಡುಗಿಯರ ಹಾಟ್ ಪೇವರಿಟ್ ಆಗಿಬಿಟ್ಟರು.ಅದಾದ ಬಳಿಕ ಇಮ್ರಾನ್ ತಮ್ಮ ಬಾಲ್ಯದ ಗೆಳತಿ ಆವಂತಿಕಾ ಜತೆ ಮದುವೆಯಾಗಿದ್ದರು. ಅವರಿಗೆ ಇಮರಾ ಎನ್ನುವ ಮಗಳೂ ಕೂಡ ಇದ್ದಳು... ಇತ್ತೀಚೆಗೆ ಇಮ್ರಾನ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ತುಂಬಾ ಅಪರೂಪವಾಗಿಬಿಟ್ಟಿದೆ. ಮೂಲಗಳ ಪ್ರಕಾರ ಇಮ್ರಾನ್ ಮತ್ತು ಆವಂತಿಕ ಡಿವೋರ್ಸ್ ತೆಗೆದುಕೊಳ್ಳಲು ಮುಂದಾಗಿದ್ದಾರಂತೆ. ಆವಂತಿಕಾ ಈಗಾಗಲೇ ಮಗಳ ಸಮೇತ ಇಮ್ರಾನ್ ಮನೆ ಬಿಟ್ಟು ತಮ್ಮ ಕುಟುಂಬದವರ ಜೊತೆ ಇದ್ದಾರಂತೆ.. ಇದು ನಿಜನೋ ಅಥವಾ ಸುಳ್ಳೊ ಎಂಬುದು ಮುಂದೆ ತಿಳಿಯಲಿದೆ.
Comments