ಸ್ಯಾಂಡಲ್ವುಡ್’ನಲ್ಲಿ ಮತ್ತೆ ಒಟ್ಟಿಗೆ ಸೇರಿದ ರಾಕಿಂಗ್ ದಂಪತಿ…!? ಸಿನಿಮಾ ಯಾವುದು ಗೊತ್ತಾ..?
ಸ್ಯಾಂಡಲ್ ವುಡ್ ನಲ್ಲಿ ಕ್ಯೂಟ್ ಕಪಲ್ಸ್ ಗಳಲ್ಲಿ ರಾಧಿಕ ಪಂಡಿತ್ ಯಶ್ ಕೂಡ ಒಬ್ಬರು… ಮಗಳ ಆಗಮನದಿಂದ ಇಬ್ಬರು ಕೂಡ ಫುಲ್ ಖುಷಿಯಲ್ಲಿದ್ದಾರೆ… ಸದ್ಯ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿರುವ ರಾಧಿಕ ಮನೆ ಗಂಡ ಮಗು ಅಂತಾ ಬ್ಯುಸಿಯಾಗಿದ್ದಾರೆ.. ಇದೀಗ ಮತ್ತೆ ರಾಧಿಕ ಇಂಡಸ್ಟ್ರಿಗೆ ಕಮ್ ಬ್ಯಾಕ್ ಮಾಡಿದ್ದಾರೆ.. ಮಕ್ಕಳ ಅಭಿನಯದಲ್ಲಿ ಮೂಡಿಬಂದಿರುವ ಗಿರ್ಮಿಟ್ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಯಿತು.
ರವಿ ಬಸ್ರೂರು ಗಿರ್ಮಿಟ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.. ಎನ್ ಎಸ್ ರಾಜ್‌ಕುಮಾರ್ ನಿರ್ಮಾಣದ ಈ ಚಿತ್ರದ ಟ್ರೇಲರ್‌ಅನ್ನು ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದರು. ಪುನೀತ್‌ಉತ್ತರ ಕರ್ನಾಟಕದ ಭಾಗದಲ್ಲಿ ಮಂಡಕ್ಕಿಗೆ ಮೆಣಸಿನಕಾಯಿ, ಈರುಳ್ಳಿ, ಟೊಮ್ಯಾಟೋ ಮಿಕ್ಸ್ ಮಾಡಿಕೊಂಡು ತಿನ್ನುವ ಪದಾರ್ಥಕ್ಕೆ ಗಿರ್ಮಿಟ್ ಎನ್ನುತ್ತಾರೆ. ಇದೀಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಬಂದಿದೆ. ರಾಜ್, ರಶ್ಮಿ ಚಿತ್ರದಲ್ಲಿ ಸ್ಕ್ರೀನ್ ಷೇರ್ ಮಾಡಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲಾ, ತಾರಾ, ಅಚ್ಯುತ್ ಕುಮಾರ್ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಮತ್ತೊಂದು ವಿಶೇಷ ಅಂದ್ರೆವಿಶೇಷ ಅಂದರೆ ಇಲ್ಲಿ ಚಿತ್ರದ ಜೋಡಿಗೆ ಧ್ವನಿ ನೀಡಿರುವುದು ಯಶ್ ಹಾಗೂ ರಾಧಿಕಾ ಪಂಡಿತ್ ಅವರು. ಇದು ಮಕ್ಕಳ ಸಿನಿಮಾವಾಗಿದೆ.. ಆದರೂ ಕೂಡ ಈ ಸಿನಿಮಾವನ್ನು ದೊಡ್ಡವರು ಕೂಡ ನೋಡಬಹುದಂತೆ..ಈ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆಯಂತೆ..ಕನ್ನಡ ಸೇರಿದಂತೆ ತೆಲುಗು,ಹಿಂದಿ,ತುಳು,ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಇಬ್ಬರು ಮಕ್ಕಳ ಪಾತ್ರಕ್ಕೆ ಯಶ್ ಮತ್ತು ರಾಧಿಕಾ ಪಂಡಿತ್ ಧ್ವನಿಯಾಗಿದ್ದಾರೆ. ಇದು ಈ ಸಿನಿಮಾದ ಹೈಲೈಟ್ ಆಗಿದೆ. ಇದೊಂದು ವಿಭಿನ್ನ ಸಿನಿಮಾ ಎನ್ನುವುದು ರವಿ ಬಸ್ರೂರು ಅವರ ಮಾತಾಗಿದೆ.
Comments