ಸುದೀಪ್ ಮಗಳು ಸಾನ್ವಿಗೆ ವಿಶ್ ಮಾಡಿದ ಖ್ಯಾತ ಖಳನಟ..!!

ಸ್ಯಾಂಡಲ್ವುಡ್ ನ ಹೆಬ್ಬುಲಿ ಕಿಚ್ಚ ಸುದೀಪ್ ಚಿತ್ರಿಕರಣದಿಂದ ಬ್ರೇಕ್ ತೆಗೆದುಕೊಂಡು ನೆನ್ನೆಯಷ್ಟೆ ಇಡೀ ಫ್ಯಾಮಿಲಿ ಜೊತೆ ಟೈಮ್ ಪಾಸ್ ಮಾಡಿದ್ದಾರೆ… ಅದಕ್ಕೆ ಕಾರಣ ಮಗಳ ಹುಟ್ಟಿದ ಹಬ್ಬ… ಮಗಳು ಸಾನ್ವಿಯ ಹುಟ್ಟುಹಬ್ಬಕ್ಕಾಗಿ ಇಡೀ ದಿನವನ್ನು ಮೀಸಲಿಟ್ಟಿದ್ದರು ಕಿಚ್ಚ ಸುದೀಪ್… ಸ್ಯಾಂಡಲ್ ವುಡ್ ನಲ್ಲಿ ಪರ್ಫೆಕ್ಟ್ ಹೀರೋ ಆಗಿರೋ ಕಿಚ್ಚ…ನಿಜ ಜೀವನದಲ್ಲಿಯೂ ಕೂಡ ಪರ್ಪೆಕ್ಟ್ ಅಪ್ಪರಾಗಿದ್ದಾರೆ.. ಮಗಳ ಹುಟ್ಟುಹಬ್ಬಕ್ಕೆ ಶುಭಾಷಯಗಳ ಮಹಾಪೂರವೇ ಹರಿದು ಬಂದಿದೆ.. ಇದರ ನಡುವೆ ಖ್ಯಾತ ಖಳನಟರೊಬ್ಬರು ಸಾನ್ವಿ ಹುಟ್ಟು ಹಬ್ಬಕ್ಕೆ ಶುಭಾಷಯ ತಿಳಿಸಿದ್ದಾರೆ..
ಮಗಳು ಸಾನ್ವಿ ಬರ್ತ್ ಡೇಗಾಗಿ ಕಿಚ್ಚ ನಿನ್ನೆ ದಿನ ಚಿತ್ರೀರಣಕ್ಕೂ ಬ್ರೇಕ್ ಹಾಕಿ ಮಗಳ ಜತೆ ಕಾಲ ಕಳೆದಿದ್ದರು. ಕಿಚ್ಚನ ಮಗಳ ಬರ್ತ್ ಡೇ ಎಂದರೆ ಕೇಳಬೇಕೇ? ಅಭಿಮಾನಿಗಳು ಟ್ವಿಟರ್ ಮೂಲಕ ಖುದ್ದಾಗಿ ಕಿಚ್ಚನಿಗೇ ಟ್ವೀಟ್ ಮಾಡಿ ಸಾನ್ವಿಗೆ ಶುಭಾಷಯ ತಿಳಿಸಿದ್ದಾರೆ... ಇದರಿಂದ ಖುಷಿಯಾದ ಕಿಚ್ಚ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಇದರ ಮಧ್ಯೆ ಸುದೀಪ್ ಮಗಳಿಗೆ ಖ್ಯಾತ ಖಳ ನಟರೊಬ್ಬರಿಂದ ವಿಶ್ ಬಂದಿದೆ. ಅದು ಕಬೀರ್ ದುಹಾ ಸಿಂಗ್ ರಿಂದ. ಕನ್ನಡ, ತೆಲುಗು, ತಮಿಳು ಇತ್ಯಾದಿ ಚಿತ್ರರಂಗದಲ್ಲಿ ಈಗ ವಿಲನ್ ಆಗಿ ಮಿಂಚುತ್ತಿರುವ ಕಬೀರ್ ಸಾನ್ವಿಗೆ ವಿಶ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್ ನಿಮ್ಮ ಪ್ರೀತಿಗೆ ಧನ್ಯವಾದಗಳು ಗೆಳೆಯ ಎಂದು ರೀಟ್ವೀಟ್ ಮಾಡಿದ್ದಾರೆ… ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರಿಗೆ ಎಷ್ಟು ಒಲವು ತೋರಿಸುತ್ತಾರೋ ಅಷ್ಟೆ ಒಲವನ್ನು ಅವರ ಮಕ್ಕಳಿಗೂ ಕೂಡ ತೋರಿಸುತ್ತಾರೆ.
Comments