ಕಾರಣವಿಲ್ಲದೆ ಚಿತ್ರಕ್ಕೆಈ ನಟಿಯನ್ನು ಬೇಡ ಅಂದಿದ್ರಂತೆ ನಿರ್ದೇಶಕರು…!!

ನಟಿ ಶಿಲ್ಪಶೆಟ್ಟಿ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರಂತೆ.. ಜೀವನದಲ್ಲಿ ಎದುರಿಸಿದ ಕಷ್ಟಗಳನ್ನು ಇದೀಗ ಅಭಿಮಾನಿಗಳ ಮುಂದಿಟ್ಟಿದ್ದಾರೆ. 1993ರಲ್ಲಿ ಬಾಜಿಗರ್ ಚಿತ್ರದ ಮೂಲಕ ಬಾಲಿವುಡ್ ಗೆ ಪ್ರವೇಶ ಮಾಡಿದ ನಟಿ ಶಿಲ್ಪಾ ಸಾಕಷ್ಟು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಸಿನಿಮಾ ಮಾಡುವುದಕ್ಕೆ ಸಿನಿಮಾ ರಂಗಕ್ಕೆ ಬಂದವರಲ್ಲ… ಅಚಾನಕ್ ಆಗಿ ಸಿನಿಮಾ ರಂಗಕ್ಕೆ ಬಂದವರು… ಫ್ಯಾಷನ್ ಶೋ ಒಂದರಲ್ಲಿ ಪಾಲ್ಗೊಳ್ಳಲು ಫೋಟೋ ಶೂಟ್ ಮಾಡಿಸಿದ್ದರಂತೆ. ನಂತ್ರ ಫ್ಯಾಷನ್ ಶೋನಲ್ಲಿ ಪಾಲ್ಗೊಂಡಿದ್ದರಂತೆ. ಅದೇ ವರ್ಷ ಸಿನಿಮಾಕ್ಕೆ ಆಫರ್ ಬಂತು ಎಂದಿದ್ದಾರೆ ಶಿಲ್ಪಾ..
ಸಿನಿಮಾ ಇಂಡಸ್ಟ್ರಿಗೆ ಬಂದಾಗ ಶಿಲ್ಪಾಗೆ ಇನ್ನೂ 17 ವರ್ಷ. ಪ್ರಪಂಚದ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ.ಜೀವನವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿತ್ತು ಎನ್ನುತ್ತಾರೆ. ಅಷ್ಟೆ ಅಲ್ಲದೆ ಹಿಂದಿ ಭಾಷೆ ದೊಡ್ಡ ಸಮಸ್ಯೆಯಾಗಿತ್ತು. ಹಿಂದಿ ಮಾತನಾಡಲು ನನಗೆ ಬರುತ್ತಾ ಇರಲಿಲ್ಲ. ಕ್ಯಾಮರಾ ಮುಂದೆ ನಿಂತುಕೊಳ್ಳಲು ಹೆದರುತ್ತಿದ್ದೆ ಎಂದು ಶಿಲ್ಪಾ ಶೆಟ್ಟಿ ಹೇಳಿಕೊಂಡಿದ್ದಾರೆ.. ಶಿಲ್ಪಾ ನಟಿಸಿದ ಎಲ್ಲ ಚಿತ್ರಗಳು ಒಂದು ಕಾಲದಲ್ಲಿ ಫ್ಲಾಪ್ ಆಗುತ್ತಿದ್ದವಂತೆ.. ಅವೆಲ್ಲಾ ನನ್ನ ಕಷ್ಟದ ದಿನಗಳು ಎನ್ನುತ್ತಾರೆ. ಯಾವುದೇ ಕಾರಣ ಹೇಳದೆ ನಿರ್ದೇಶಕರು ಹಾಗೂ ನಿರ್ಮಾಪಕರು ನನ್ನನ್ನು ಚಿತ್ರದಿಂದ ಹೊರ ಹಾಕುತ್ತಿದ್ದರು ಎನ್ನುತ್ತಾರೆ. ಈ ವೇಳೆ ಬದಲಾವಣೆಗಾಗಿ ಬಿಗ್ ಬ್ರದರ್ ನಲ್ಲಿ ಭಾಗವಹಿಸಿದೆ. ಅಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಬೇಕಾಯಿತು. ಅಲ್ಲಿ ನನಗೆ ಕಷ್ಟದ ಜೊತೆಗೆ ಯಶಸ್ಸು ನನ್ನ ಜೊತೆಗೆ ಬಂತು. ಯಶಸ್ಸು ನನ್ನನ್ನು ಬಲಪಡಿಸುತ್ತಿತ್ತು ಎಂದಿದ್ದಾರೆ. ಬಣ್ಣದ ಬದುಕು ನೀರಿನ ಮೇಲಿನ ಗುಳ್ಳೆ ಇದ್ದ ಆಗೆ…. ಯಾವಾಗ ಅದೃಷ್ಟ ಚೆನ್ನಾಗಿರುತ್ತದೆಯೋ ಅವಾಗ ಮಾತ್ರ ಸಕ್ಸಸ್ ಕಾಣೋದಕ್ಕೆ ಸಾಧ್ಯ…
Comments