ಕೆಲಸ ಮಾಡಿದರೂ ಸಂಬಳ ಸಿಗದ ನಟಿಯ ನೋವಿನ ಕಣ್ಣೀರು..!!
ಸಾಕಷ್ಟು ಯುವಕ ಯುವತಿಯರಿಗೆ ಬಣ್ಣದ ಲೋಕದ ಗೀಳಿರುತ್ತದೆ.. ಬಣ್ಣದ ಲೋಕ ತುಂಬ ಸುಂದರವಾಗುರುತ್ತದೆ.. ಅಲ್ಲಿ ಒಮ್ಮೆ ನೆಲೆಕಂಡುಕೊಂಡರೆ ಸಾಕು ಬಾಳು ಬಂಗಾರವಾಗುತ್ತದೆ. ಒಳ್ಳೆಯ ನೇಮು ಪ್ರೇಮು ಎರಡು ಸಿಗುತ್ತದೆ ಎಂಬುದು ಕೆಲವರ ನಂಬಿಕೆಯಾಗಿರುತ್ತದೆ.. ಅದೆಲ್ಲಾ ಸಿಗುವುದು ಕೆಲವರಿಗೆ ಮಾತ್ರ... ಬಣ್ಣದ ಲೋಕ ತುಂಬಾ ಸುಂದರವಾಗಿರುತ್ತದೆ. ಕಲಾವಿದರು ತೆರೆ ಮೇಲೆ ಎಲ್ಲರನ್ನು ಆಕರ್ಷಿಸುತ್ತಾರೆ. ಆದರೆ ತೆರೆ ಹಿಂದೆ ಅವರು ಅನುಭವಿಸುವ ಕಷ್ಟಗಳು ಮಾತ್ರ ಸಾಕಷ್ಟಿರುತ್ತವೆ.
ಅದೇ ರೀತಿಯಾಗಿ ಕಿರುತೆರೆ ನಟಿಯೊಬ್ಬಳು ತನ್ನ ನೋವನ್ನು ಎಲ್ಲರ ಜೊತೆ ಹಂಚಿಕೊಂಡಿದ್ದಾಳೆ.. ಕಿರುತೆರೆ ನಟಿ ರುಬಿನಾ ಸಂದರ್ಶನವೊಂದರಲ್ಲಿ ತನ್ನ ನೋವನ್ನು ಹಂಚಿಕೊಂಡಿದ್ದಾಳೆ. ದಿನಕ್ಕೆ 12-14 ಗಂಟೆಗಳ ಕಾಲ ನಿರಂತರ ಕೆಲಸ ಮಾಡುತ್ತೇವೆ. ನಮ್ಮ ಕೆಲಸಕ್ಕೆ 90 ದಿನಗಳ ನಂತ್ರ ಪ್ರತಿಫಲ ಸಿಗುತ್ತದೆ ಎಂದು ರುಬಿನಾ ಹೇಳಿಕೊಂಡಿದ್ದಾಳೆ..ಛೋಟಿ ಬಹು ಸೀರಿಯಲ್ ನಲ್ಲಿ ಅಭಿನಯಿಸಿರುವ ರುಬಿನಾಗೆ ಪ್ರಾರಂಭದ ದಿನಗಳಲ್ಲಿ ಈ ನಿಯಮಗಳನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿತ್ತಂತೆ.. ಆದರೆ ಬದಲಾವಣೆಗೆ ಮಾತ್ರ ಯಾವುದೇ ಅವಕಾಶವಿರಲಿಲ್ಲ.. ಹಿಂದಿನಿಂದಲೂ ಈ ರೂಲ್ಸ್ ಇದೆ. ಬೇಕಾದ್ರೆ ನಮ್ಮ ನಿಯಮದಂತೆ ನಡೆದುಕೊಳ್ಳಿ, ಇಲ್ಲವಾದ್ರೆ ಬಿಟ್ಟುಬಿಡಿ ಎಂದು ಖಡಕ್ ಆಗಿಯೇ ಹೇಳುತ್ತಿದ್ದಂತೆ. ರುಬಿನಾ, ಧಾರಾವಾಹಿಯಲ್ಲಿ ದಿನಕ್ಕೆ 12 ಗಂಟೆ ದುಡಿಯುತ್ತಿದ್ದಳಂತೆ. ಸಂಬಳ ಮಾತ್ರ ತಿಂಗಳಿಗೆ ಬರ್ತಿರಲಿಲ್ಲವಂತೆ. 90 ದಿನಕ್ಕೆ ಸಂಬಳ ಕೈಗೆ ಬರುತ್ತಿತ್ತಂತೆ. ಅಲ್ಲಿಯವರೆಗೆ ಜೀವನ ನಡೆಸುವುದು ಕಷ್ಟವಾಗ್ತಾಯಿತ್ತು ಎಂದಿದ್ದಾಳೆ ರುಬಿನಾ. ಶೋ ಬಂದ್ ಆಗ್ತಿದ್ದಂತೆ ಬರಬೇಕಿದ್ದ ಹಣ ಈಕೆಗೆ ಬರಲಿಲ್ಲವಂತೆ. ಲಕ್ಷಾಂತರ ರೂಪಾಯಿ ಸಂಬಳ ಬರಬೇಕಿತ್ತು. ಕಲಾವಿದರ ಸಂಘಕ್ಕೂ ದೂರು ನೀಡಿದ್ದಾಳಂತೆ. ಆದ್ರೆ ಇನ್ನೂ ಹಣ ಬಂದಿಲ್ಲ ಎನ್ನುತ್ತಾಳೆ ರುಬೀನಾ.. ಒಟ್ಟಿನಲ್ಲಿ ಬಣ್ಣದ ಲೋಕದ ಆಸೆಗೆ ಬಿದ್ದವರಿಗೆ ಇದೊಂದು ಉತ್ತಮ ನಿದರ್ಶನದಂತಾಗಿದೆ..ಬಣ್ಣದ ಲೋಕದಲ್ಲಿಯೂ ಕೂಡ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ.. ಎಲ್ಲದಕ್ಕೂ ಕೂಡ ಸಿದ್ದರಿರುವವರಿಗೆ ಮಾತ್ರ ಈ ಬಣ್ಣದ ಲೋಕ.
Comments