ರೆಬಲ್ ಸ್ಟಾರ್ ನ ಕನಸಿನ ಮನೆಯ ಗೃಹ ಪ್ರವೇಶ..

18 May 2019 9:40 AM | Entertainment
472 Report

ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನೆಲ್ಲಾ ಅಗಲಿ ತಿಂಗಳುಗಳೇ ಕಳೆದಿವೆ...ಇದೀಗ ಅವರ ಕನಸಿನ ಮನೆಯ ಗೃಹಪ್ರವೇಶವಾಗಿದೆ.. ಶುಕ್ರವಾರ ದಿವಂಗತ ನಟ ಅಂಬರೀಶ್ ಅವರ ಕನಸಿನ ಮನೆಯ ಗೃಹ ಪ್ರವೇಶವನ್ನು ಪತ್ನಿ ಸುಮಲತಾ ಅಂಬರೀಶ್ ಮತ್ತು ಪುತ್ರ ಅಭಿಷೇಕ್ ಅವರು ಸರಳವಾಗಿ ಮಾಡಿದ್ದಾರೆ. ಗೃಹ ಪ್ರವೇಶವನ್ನು ಸರಳವಾಗಿ ಮಾಡಿದ್ದು, ಆಪ್ತರು, ಕುಟುಂಬದ ಸದಸ್ಯರು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು..

ಬೆಂಗಳೂರಿನ ಜೆಪಿ ನಗರದಲ್ಲಿರುವ ರೆಬೆಲ್ ಸ್ಟಾರ್ ಅಂಬರೀಶ್ ನಿವಾಸಕ್ಕೆ ಗೃಹ ಪ್ರವೇಶ ಮಾಡಿ ಸುಮಲತಾ ಮತ್ತು ಅಭಿಷೇಕ್ ಹೋಗಿದ್ದಾರೆ. ಅಂಬರೀಶ್ ಅವರು ಬದುಕಿದ್ದ ವೇಳೆಯಲ್ಲಿ ಈ ಮನೆಯನ್ನ ಕೆಡವಿ ಹೊಸ ಜಮಾನಕ್ಕೆ ತಕ್ಕಂತೆ ಹಾಗೂ ತಮ್ಮ ಮಗನಿಗೆ ಇಷ್ಟವಾಗುವ ರೀತಿಯಲ್ಲಿ ನವೀಕರಣ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದರು. ಈ ಮನೆಯಲ್ಲಿ ಇನ್ನೂ ಸ್ವಲ್ಪ ಕೆಲಸ ಬಾಕಿ ಉಳಿದಿದೆ. ಹೀಗಿರುವಾಗಲೇ ಶುಕ್ರವಾರ ಒಳ್ಳೆಯ ದಿನ ಅನ್ನೋ ಕಾರಣಕ್ಕೆ ಪೂಜೆ ಸಲ್ಲಿಸಿ ಹೊಸಮನೆಗೆ ಹೋಗಿದ್ದಾರೆ ಎಂದು .ಹೇಳಲಾಗುತ್ತಿದೆ.. ಕನಸಿನ ಮನೆಯಲ್ಲಿ ಅಂಬರೀಶ್ ಅವರು ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದರು.. ಆ ಕನಸುಗಳೆಲ್ಲಾ ನನಸಾಗುವ ಮುನ್ನವೇ ಇಹಲೋಕ ತ್ಯಜಿಸಿದರು... ಇದೀಗ ಜೆಪಿ ನಗರದ ಮನೆಯನ್ನು ಬಹಳ ಸರವಾಗಿ ಗೃಹಪ್ರವೇಶ ಮಾಡಿದ್ದಾರೆ ಎನ್ನಲಾಗಿದೆ. ಇನ್ನೂ ಸುಮಲತಾ ಅವರಿಗೆ ಈ ಮೇ ತಿಂಗಳು ತುಂಬಾ ಅಮೂಲ್ಯವಾದದ್ದು ಎಂದು.. ಅವರ ರಾಜಕೀಯ ಭವಿಷ್ಯ ಕೂಡ ಇದೇ ತಿಂಗಳು ನಿರ್ಧಾರವಾಗಲಿದೆ.

Edited By

Manjula M

Reported By

Manjula M

Comments