ಬಾಲಿವುಡ್ ಸಿನಿಮಾವನ್ನ ಕೈ ಬಿಟ್ಟ 'ಕಿರಿಕ್ʼ ಬೆಡಗಿ ಸಾನ್ವಿ.!

ಸಾನ್ವಿ ಅಲಿಯಾಸ್ ರಶ್ಮಿಕಾ ಮಂದಣ್ಣ… ಸದ್ಯ ಬಣ್ಣದ ಜಗತ್ತನ್ನು ಆಳುತ್ತಿರುವ ಸೆನ್ಷೇಷನಲ್ ಹುಡುಗಿ… ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಾನ್ವಿಯಾಗಿ ಎಂಟ್ರಿ ಕೊಟ್ಟ ರಶ್ಮಿಕಾ ಕರ್ನಾಟಕದ ಕ್ರಶ್ ಆಗಿದ್ರು.. ಆದರೆ ಇದೀಗ ಇಡೀ ಸೌತ್ ಇಂಡಿಯಾದ ಕ್ರಶ್ ಆಗಿ ಬಿಟ್ಟಿದ್ದಾರೆ. ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಸೌತ್ ಇಂಡಿಯನ್ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಜೊತೆ ತೆರೆ ಹಂಚಿಕೊಂಡ ಮೇಲೆ ರಶ್ಮಿಕಾ ಟಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ.
ಇದೀಗ ರಶ್ಮಿಕಾ ಅಲ್ಲು ಅರ್ಜುನ್ ಜೊತೆಗೆ ಅಭಿನಯಿಸಲಿದ್ದಾರೆ. ಅಲ್ಲು ಅರ್ಜುನ್ ಅಭಿನಯದ 'ಎಎ20' ಸಿನಿಮಾದಲ್ಲಿ ರಶ್ಮಿಕಾ ಅಲ್ಲು ಅರ್ಜುನ್ ಜೊತೆ ಸ್ಕ್ರೀನ್ ಷೇರ್ ಮಾಡುತ್ತಿದ್ದಾರೆ.. ಟಾಲಿವುಡ್ ನಟನ ಜೊತೆ ನಟಿಸಲು ರಶ್ಮಿಕಾ ಬಾಲಿವುಡ್ ನಿಂದ ಬಂದ ಆಫರ್ ತಿರಸ್ಕರಿಸಿದ್ದಾರಂತೆ…..ಪ್ರಿನ್ಸ್ ಮಹೇಶ್ ಬಾಬು ಅವರ ಮುಂದಿನ ಸಿನಿಮಾಗೆ ರಶ್ಮಿಕಾ ನಾಯಕಿ ಅನ್ನೋ ಸುದ್ದಿ ಎಲ್ಲೆಡೆ ಹಬ್ಬಿದೆ… ಹೀಗಾಗಿ ಬಾಲಿವುಡ್ ನಲ್ಲಿ ರಣದೀಪ್ ಹೂಡಾ ನಾಯಕತ್ವದ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ಚಿತ್ರದ ಆಫರನ್ನು ನಟಿ ರಶ್ಮಿಕಾ ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.. ಮಹೇಶ್ ಬಾಬು ಅವರ 26 ನೇ ಚಿತ್ರಕ್ಕೆ ರಶ್ಮಿಕಾ ನಾಯಕಿ ಅಂತಾ ಹೇಳಲಾಗ್ತಿದೆ. ಒಟ್ನಲ್ಲಿ ಕನ್ನಡದ ಚೆಲುವೆ ಸೌತ್ ಸಿನಿ ದುನಿಯಾದಲ್ಲಿ ಸಖತ್ ಆಗಿಯೇ ಮಿಂಚುತ್ತಿದ್ದಾರೆ… ಕರ್ನಾಟಕದ ಕ್ರಶ್ ಗೆ ಇದೀಗ ಎಲ್ಲೆಡೆ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.. ಕೆಲವೊಮ್ಮೆ ಸಮಾಜ ಸೇವೆಗಳಲ್ಲಿ ತೊಡಗಿಕೊಳ್ಳುವ ರಶ್ಮಿಕಾ ಲಿಪ್ ಲಾಕ್ ಸೀನ್ ಗಳಿಂದ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಂತೂ ಸುಳ್ಳಲ್ಲ.. ಅದೇನೆ ಇರಲಿ ಕರ್ನಾಟಕ ಹುಡುಗಿ ಬಾಲಿವುಡ್ ನಲ್ಲಿ ಮಿಂಚುವುದು ಅಂದ್ರೆ ಸುಮ್ನೆನಾ..!!
Comments