ರವಿಮಾಮನ ಮಗಳ ಮದುವೆಗೆ ಯಾರೆಲ್ಲಾ ಬರ್ತಿದ್ದಾರೆ ಗೊತ್ತಾ..?
ಸ್ಯಾಂಡಲ್ ವುಡ್ ನ ಕ್ರೇಜಿ ಸ್ಟಾರ್ ಮಗಳ ಮದುವೆ ಅಂದ್ರೆ ಸುಮ್ನೆನಾ…?ರವಿಮಾಮ ನ ಫಿಲ್ಮ್ ನೊಡೋಕೆ ಒಂಥರಾ ಚೆಂದ ಅವರು ಬಳಸುವ ಪ್ರಾಪರ್ಟಿಗಳನ್ನು ನೋಡುವವರು ಒಮ್ಮೆ ಅಬ್ಬಾ ಅಂತಾರೆ ಅಷ್ಟೆ… ಆ ರೀತಿ ಇರುತ್ತೆ.. ಇನ್ನೂ ಮಗಳ ಮದುವೆ ಅಂದ್ರೆ .. ಇನ್ನು ಹೇಗಿರುತ್ತೆ ಅಂತಾ ಒಮ್ಮೆ ಯೋಚನೆ ಮಾಡಿ… ಅದ್ದೂರಿ ಸೆಟ್ ನಲ್ಲಿಯೇ ಮಗಳ ಮದುವೆ ಮಾಡುತ್ತಿದ್ದಾರೆ ರವಿಮಾಮ..
ಸ್ಯಾಂಡಲ್ವುಡ್ ಸ್ಟಾರ್ ರವಿಚಂದ್ರನ್ ಮಗಳ ಮದುವೆ ತಯಾರಿಯಲ್ಲಿ ಫುಲ್ ಬ್ಯುಸಿ ಆಗಿದ್ದಾರೆ. ಇದೇ 29 ರಂದು ರವಿಚಂದ್ರನ್ ಮಗಳು ಗೀತಾಂಜಲಿ ಮದುವೆ ಅದ್ಧೂರಿಯಾಗಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಇಂದು ಸುದ್ದಿಗಾರರ ಜೊತೆ ಕೆಲವು ವಿಚಾರಗಳನ್ನ ಹಂಚಿಕೊಂಡರುನಾನು ನಮ್ಮ ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ 2 ಸಾವಿರ ಆಹ್ವಾನ ಪತ್ರಿಕೆ ನೀಡಿದ್ದೇನೆ. ಜೊತೆಗೆ ನಾನು ಮತ್ತು ನನ್ನ ಹೆಂಡತಿ ತಮಿಳುನಾಡು, ಆಂಧ್ರಪ್ರದೇಶ, ಬಾಂಬೆ ಎಲ್ಲಾ ಕಡೆ ಹೋಗಿ ಗಣ್ಯರಿಗೆ ಆಹ್ವಾನ ಕೊಟ್ಟಿ ಬಂದಿದ್ದೀವಿ... ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್, ಮೆಗಾ ಸ್ಟಾರ್ ಚಿರಂಜೀವಿಗೂ ಆಹ್ವಾನ ಕೊಟ್ಟಿದ್ದೀವಿ.. ಎಲ್ಲರಿಗೂ ಗೂ ಮದುವೆಯ ಆಮಂತ್ರಣ ಕೊಟ್ಟಿದ್ದೀನಿ. ಎಲ್ಲರೂ ಬರುವ ನಿರೀಕ್ಷೆ ಇದೆ ಎಂದು ಕ್ರೇಜಿ ಸ್ಟಾರ್ ತಿಳಿಸಿದರು.. ನಮ್ಮ ಎಲ್ಲಾ ವಿಚಾರಗಳನ್ನು ಅಭಿಮಾನಿಗಳಿಗೆ ಮುಟ್ಟಿಸುವುದು ಮಾಧ್ಯಮದವರು.. ಹಾಗಾಗಿ ಮಾಧ್ಯಮದವರು ಕೂಡ ಮದುವೆಗೆ ಬಂದು ಶುಭ ಆರೈಸಿ ಎಂದು ತಿಳಿಸಿದರು..
Comments