ಚಾಲೆಂಜಿಂಗ್ ಸ್ಟಾರ್ ಅಭಿನಯದ ಕುರುಕ್ಷೇತ್ರ ಸಿನಿಮಾ ಬಿಡುಗಡೆಗೆ ಮೂಹೂರ್ತ ಫಿಕ್ಸ್…!!

17 May 2019 11:26 AM | Entertainment
1756 Report

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾವಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೋ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಐತಿಹಾಸಿಕ ಸಿನಿಮಾಗಳು ಸಾಕಷ್ಟು ಬರುತ್ತಿವೆ… ಆದರೆ ದರ್ಶನ್ ಐತಿಹಾಸಿಕ ಪಾತ್ರಗಳಲ್ಇ ಚೆನ್ನಾಗಿ ಕಾಣಿಸುತ್ತಾರೆ ಎಂಬುದು ಅಭಿಮಾನಿಗಳ ಮಾತು..ಇದೀ*ಗ ಸಿನಿಮಾ ಬಿಡುಗಡೆ ಯಾವಾಗ ಎಂಬುದನ್ನು ಚಿತ್ರತಂಡ ತಿಳಿಸಿದೆ.

ಕುರುಕ್ಷೇತ್ರ…ಕನ್ನಡ ಚಿತ್ರರಂಗದ ಮಹಾ ದೃಶ್ಯ ಕಾವ್ಯ. ಬಹಳ ವರ್ಷಗಳ ನಂತರ ಕನ್ನಡದಲ್ಲಿ ನಿರ್ಮಾಣವಾಗಿರೋ ಬಹುತಾರಾಗಣದ ಪೌರಾಣಿಕ ಚಿತ್ರಇದಾಗಿದೆ... ದರ್ಶನ್​​ ಕುರುಕ್ಷೇತ್ರದಲ್ಲಿ ದುರ್ಯೋಧನನಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.. ಡಿ ಬಾಸ್ ಅಭಿಮಾನಿಗಳಿಗೆ ಚಿತ್ರತಂಡ ಸಿಹಿ ಸುದ್ದಿ ನೀಡಲಿದೆ. ಸಿನಿಮಾ ಬಿಡುಗಡೆಗಾಗಿ  ಇದೇ ಶನಿವಾರ ಸಂಜೆ 6 ಗಂಟೆಗೆ ಖಾಸಗಿ ಹೋಟೆಲೊಂದರಲ್ಲಿ ಚಿತ್ರತಂಡ ಅಧಿಕೃತವಾಗಿ ಕುರುಕ್ಷೇತ್ರ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ. ಕೆಜಿಎಫ್ ಚಿತ್ರದಂತೆ ಕುರುಕ್ಷೇತ್ರ ಚಿತ್ರ ಕೂಡ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ…. ಈಗಾಗಲೇ ಎಲ್ಲಾ ಭಾಷೆಗಳ ಟ್ರೇಲರ್‌ಗಳು ಮಿಂಚಲು ಸಜ್ಜಾಗುತ್ತಿದ್ದು, ಜೂನ್ ಮೊದಲ ವಾರದಲ್ಲಿ ಅದ್ಧೂರಿಯಾಗಿ ಆಡಿಯೋ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ… ಕುರುಕ್ಷೇತ್ರ ಸಿನಿಮಾಗಾಗಿ ದರ್ಶನ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ … ಎಲ್ಲಾ ಅಂದುಕೊಂಡತೆ ಅಂದುಕೊಂಡಿದ್ದರೆ ಸಿನಿಮಾ ಇಷ್ಟೋತ್ತಿಗೆ ಬಿಡುಗಡೆಯಾಗ ಬೇಕಿತ್ತು.. ಆದರೆ ಸಿನಿಮಾ ಬಿಡುಗಡೆ ಕೊಂಚ ತಡವಾಗಿದೆ.. ತೆರೆಮೇಲೆ ದರ್ಶನ್ ದುರ್ಯೋಧನನಾಗಿ ಯಾವ ರೀತಿ ತೆರೆ ಮೇಲೆ ಮಿಂಚುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments