ಮದುವೆ ಆದ ಮೇಲೆ ಸಿನಿಮಾ ಮಾಡಬಾರದು ಅಂತ ರೂಲ್ಸ್ ಇದೆಯಾ ಎಂದ ‘ಮನಸಾರೆ’ ಚೆಲುವೆ..!!
ಸಾಮಾನ್ಯವಾಗಿ ಬಣ್ಣದ ಜಗತ್ತಿನ ನಟಿ ಮಣಿಯರು ಮದುವೆಯಾದ ಮೇಲೆ ಚಿತ್ರರಂಗದಿಂದ ದೂರ ಉಳಿದುಬಿಡುತ್ತಾರೆ ಎನ್ನುವ ಮಾತುಗಳಿವೆ.. ಅದಕ್ಕೆ ಸಾಕಷ್ಟು ನಿದರ್ಶನಗಳು ಕೂಡ ಇವೆ. ಮದುವೆಯಾದ ಮೇಲೆ ಮನೆ ಗಂಡ ಮಕ್ಕಳು ಅಂತಾ ಬ್ಯುಸಿಯಾಗಿರುವ ಎಷ್ಟೋ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ.. ಇದೀಗ ಅದೇ ವಿಷಯ ಬಗ್ಗೆ ಮಾತನಾಡಿದ್ದಾರೆ ದಿಗಂತ್ ನ ಮನಸಾರೆ ಹುಡುಗಿ ಐಂದ್ರಿತಾ ರೇ…
ವಿವಾಹದ ನಂತರ ನಟಿಮಣಿಯರು ಸಿನಿಮಾ ಮಾಡುವುದಿಲ್ಲ ಎನ್ನುವುದು ಹಳೇಯ ವಿಷಯವಾಗಿ ಬಿಟ್ಟಿದೆ.. ಇದೀಗ ಸ್ಯಾಂಡಲ್ ವುಡ್ ನಲ್ಲೂ ಮದುವೆಯಾದ ಮೇಲಿಯೂ ಸಿನಿಮಾ ಮಾಡುವುದು ಟ್ರೆಂಡ್ ಆಗುತ್ತಿದೆ. ಇತ್ತೀಚೆಗಷ್ಟೇ ಮದುವೆಯಾದ ಐಂದ್ರಿತಾ ರೇ ಕೆಲವು ದಿನಗಳ ಬ್ರೇಕ್ ತೆಗೆದುಕೊಂಡು ಇದೀಗ ಮತ್ತೆ ಸಿನಿ ಲೋಕಕ್ಕೆ ಎಂಟ್ರಿ ಕೊಡುವ ಸುದ್ದಿ ನೀಡಿದ್ದಾರೆ. ನೆನಪಿರಲಿ ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯಂ ಸಿನಿಮಾಗೆ ನಾಯಕಿಯಾಗಿ ಐಂದ್ರಿತಾ ರೇ ಆಯ್ಕೆಯಾಗಿದ್ದಾರೆ. ಈ ಸಿನಿಮಾದ ಮೂಲಕ ಮದುವೆಯಾದ ನಂತರವು ಮೊದಲ ಸಿನಿಮಾಗೆ ಸಹಿ ಹಾಕಿದ್ದಾರೆ ಐಂದ್ರಿತಾ. ಇದಕ್ಕೂ ಮೊದಲು ಮೇಘನಾ ರಾಜ್ ಕೂಡಾ ಮದುವೆಯಾದ ಹಲವು ದಿನಗಳ ನಂತರ ಸೃಜನ್ ಲೋಕೇಶ್ ಜತೆಗೆ ಹೊಸ ಸಿನಿಮಾ ಒಪ್ಪಿಕೊಂಡ ಸುದ್ದಿ ನೀಡಿದ್ದರು. ಇದೀಗ ಐಂದ್ರಿತಾ ಸರದಿ. ಮದುವೆಯಾಯಿತು ಎಂದರೆ ಸಿನಿಮಾ ಮಾಡಬಾರದು ಎಂದು ರೂಲ್ಸ್ ಏನು ಇಲ್ಲ… ಮದುವೆಯಾದ ಮಾತ್ರಕ್ಕೆ ನಟಿಯರ ಬದುಕು ಮುಗಿಯಿತು ಎಂದರ್ಥವಲ್ಲ ಎಂದು ಐಂದ್ರಿತಾ ತಮ್ಮ ಕಮ್ ಬ್ಯಾಕ್ ಬಗ್ಗೆ ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ಸ್ಯಾಂಡಲ್ ವುಡ್ ನಲ್ಲಿ ಮದುವೆಯಾದ ಮೇಲಿಯೂ ಕೂಡ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ ನಾಯಕಿರು…
Comments