ರೌಡಿ ಬೇಬಿ ಆಯ್ತು ..!! ಈಗ ಯೂಟ್ಯೂಬ್’ನಲ್ಲಿ ಟ್ರೆಂಡ್ ಆಯ್ತು ಪೊಲೀಸ್ ಬೇಬಿ..!!

16 May 2019 12:46 PM | Entertainment
675 Report

ರೌಡಿ ಬೇಬಿ ಎಂದರೆ ಫಟ್ ಅಂತಾ ನೆನಪಾಗೋದು ಸಾಯಿ ಪಲ್ಲವಿ… ರೌಡಿ ಬೇಬಿ ಸಾಂಗ್ ಗೆ ಧನುಸ್ ಜೊತೆ ಸಖತ್ ಆಗಿಯೆ ಸ್ಟೆಪ್ ಹಾಕಿದ್ದಾರೆ ನಮ್ ಸಾಯಿ ಪಲ್ಲವಿ..ಇಷ್ಟು ದಿನ ರೌಡಿ ಬೇಬಿ ಎನ್ನುತ್ತಿದ್ದವರು ಈಗ ಪೊಲೀಸ್ ಬೇಬಿ ಎನ್ನುತ್ತಿದ್ದಾರೆ.. ಎಸ್.. ಸೆಂಚುರಿ ಸ್ಟಾರ್ ಶಿವಣ್ಣ ಅಭಿನಯದ ರುಸ್ತುಂ ಸಿನಿಮಾದಲ್ಲಿರುವ ಪೊಲೀಸ್ ಬೇಬಿ ಹಾಡು ಯೂಟ್ರೂಬ್ ನಲ್ಲಿ ಟ್ರೆಂಡ್ ಆಗಿ ಬಿಟ್ಟಿದೆ..

ಶಿವಣ್ಣನಿಗೆ ವಯಸ್ಸು 50 ದಾಟಿದ್ರೂ ಇನ್ನೂ ನವ ಯುವಕರು ನಾಚುವಂತೆ ಸ್ಟೆಪ್ ಹಾಕಿ ಅಭಿಮಾನಿಗಳು ಕುಣಿದು ಕುಪ್ಪಳಿಸುವಂತೆ ಮಾಡ್ತಾರೆ. ಸದ್ಯ ರವಿವರ್ಮ ಆ್ಯಕ್ಷನ್ ಕಟ್ ನಲ್ಲಿ ಮೂಡಿ  ಬರ್ತಿರೋ ‘ರುಸ್ತುಂ’ ಚಿತ್ರದ ‘ಯೂ ಆರ್​ ಮೈ ಪೊಲೀಸ್ ಬೇಬಿ’ ಅನ್ನೋ ಮೊದಲ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ.. ಹಾಡಿನಲ್ಲಿ ಯೂಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ಜೊತೆಯಾಗಿ ಶಿವಣ್ಣ ಸಖತ್ ಆಗಿಯೇ ಸ್ಟೆಪ್ ಹಾಕಿದ್ದಾರೆ.. ಇನ್ನು ಈ ಹಾಡಿಗೆ ಎ.ಪಿ ಅರ್ಜುನ್ ಸಾಹಿತ್ಯ ಬರೆದಿದ್ದು ರಘು ದೀಕ್ಷಿತ್ ಹಾಗೂ ಅಪೂರ್ವ ಶ್ರೀಧರ್ ಈ ಹಾಡನ್ನು ಹಾಡಿದ್ದಾರೆ. ಸದ್ಯ ಈ ಸಾಂಗ್ ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿದೆ… ಈ ಸಿನಿಮಾ ಜೂನ್ 14 ರಂದು ತೆರೆ ಕಾಣಲಿದೆ.. ಶಿವಣ್ಣನ ಅಭಿಮಾನಿಗಳು ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

Edited By

Manjula M

Reported By

Manjula M

Comments