ಆಟಿಕೆ ನುಂಗಿ ಮಗಳು ಸಾವನ್ನಪ್ಪಿದ ನೋವನ್ನು ಹಂಚಿಕೊಂಡ ನಟ..!!
ನಟನ ಮಗು ಆಟ ಆಡುವಾಗ ಆಟಿಕೆ ನುಂಗಿ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದ್ದು ಎಲ್ಲರಿಗೂ ಕೂಡ ತಿಳಿದೆ ಇದೆ.… 'ಪ್ಯಾರ್ ಕೆ ಪಾಪಡ್' ಟಿವಿ ಶೋ ನಟ ಪ್ರತಿಷ್ ವೋರಾ ಅವರ 2 ವರ್ಷದ ಮಗು ಪ್ಲಾಸ್ಟಿಕ್ ಆಟಿಕೆ ನುಂಗಿ ಸಾವನ್ನಪ್ಪಿತ್ತು.. ಕಿರುತೆರೆ ನಟರಾಗಿರುವ ಪ್ರತಿಷ್ ವೋರಾ ಅವರು 'ಪ್ಯಾರ್ ಕೆ ಪಾಪಡ್' ಶೋ ಮೂಲಕ ಖ್ಯಾತಿ ಪಡೆದಿದ್ದರು..ಪ್ಲಾಸ್ಟಿಕ್ ಆಟಿಕೆಗಳೊಂದಿಗೆ ಆಟವಾಡುವಾಗ ಆಟಿಕೆಯೊಂದನ್ನು ಮಗು ನುಂಗಿದೆ. ಅದು ಗಂಟಲಲ್ಲಿ ಸಿಲುಕಿ ಉಸಿರಾಡಲು ಸಾಧ್ಯವಾಗದೆ ಮಗು ಸಾವನ್ನಪ್ಪಿದೆ …
ಇದೀಗ ಟಿವಿ ನಟ ಪ್ರತೀಶ್ ವೊರಾ ಎರಡು ವರ್ಷದ ಮಗುವನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಆಟಿಕೆಯನ್ನು ನುಂಗಿ ಪ್ರತೀಶ್ ವೊರಾ ಮಗಳು ಸಾವನ್ನಪ್ಪಿದ್ದಳು. ಸಂದರ್ಶನವೊಂದರಲ್ಲಿ ಅಂದು ನಡೆದ ಘಟನೆಯನ್ನು ಪ್ರತೀಶ್ ಎಲ್ಲರ ಮುಂದೆ ಹೇಳಿಕೊಂಡಿದ್ದಾರೆ.. ಈ ಘಟನೆ ನಡೆದ ದಿನ ಪ್ರತೀಶ್, ಸ್ನೇಹಿತರ ಜೊತೆ ಪಾರ್ಟಿ ಮಾಡ್ತಿದ್ದರಂತೆ. ಫಿಜ್ಜಾ ತಿನ್ನುತ್ತಿದ್ದಾಗ ಮಗಳು ಬಾಯಿಗೆ ಆಟಿಕೆ ಹಾಕಿದ್ದು ಗೊತ್ತಾಯ್ತಂತೆ. ತಕ್ಷಣ ಪ್ರತೀಶ್ ಆಕೆ ಬಾಯಿಗೆ ಕೈ ಹಾಕಿದ್ದಾರಂತೆ. ಆದ್ರೆ ಮಗಳು ಕೈ ಕಚ್ಚಿದಳಂತೆ. ಆಕೆ ಹೆದರಿದ್ದಳು. ಆಟಿಕೆ ಒಳಗೆ ಹೋಗಿತ್ತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಕೂಡ ಯಾವುದೇ ರೀತಿಯ ಫಲಕಾರಿಯಾಗಲಿಲ್ಲ ಎಂದಿದ್ದಾರೆ… ಮಗುವಿನ ಮೂಗಿನಿಂದ ರಕ್ತ ಬರುತ್ತಿತ್ತು... ವೈದ್ಯರ ಬಳಿ ಹೋದಾಗ ರಕ್ತ ಬಂದ್ ಆಗಿತ್ತು. ಅಷ್ಟರಲ್ಲಿ ನನ್ನ ಮಗಳು ಉಸಿರು ನಿಲ್ಲಿಸಿದ್ದಳು. ಕೆಲವೇ ಕ್ಷಣಗಳಲ್ಲಿ ಎಲ್ಲವೂ ನಡೆದು ಹೋಗಿತ್ತು ಎಂದು ಪ್ರತೀಶ್ ಹೇಳಿದ್ದಾರೆ. ಹಾಗಾಗಿಯೇ ಮಕ್ಕಳನ್ನು ನೋಡಿಕೊಳ್ಳುವಾಗ ತುಂಬಾ ಜೋಪಾನದಿಂದ ಜೋಡಿಕೊಳ್ಳಬೇಕು.. ಸ್ವಲ್ಪ ಎಚ್ಚರ ತಪ್ಪಿದರೂ ಕೂಡ ಈ ರೀತಿಯ ಅನಾಹುತಗಳಾಗುತ್ತವೆ…
Comments