ದರ್ಶನ್ ಸೆರೆಹಿಡಿದ ಚಿತ್ರಕ್ಕೆ ಚಿಕ್ಕಣ್ಣ ಕಟ್ಟಿದ ಬೆಲೆ ಎಷ್ಟು ಗೊತ್ತಾ..?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದಲ್ಲ ಒಂದು ವಿಷಯಕ್ಕೆ ಪ್ರತಿ ದಿನ ಸುದ್ದಿಯಾಗುತ್ತಿದ್ದಾರೆ.. ಇಷ್ಟು ಎಲೆಕ್ಷನ್ ಕ್ಯಾಂಪೆನ್ ನಲ್ಲಿ ಬ್ಯುಸಿಯಾಗಿದ್ದ ದರ್ಶನ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳೆಂದರೆ ತುಂಬಾ ಇಷ್ಟ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಕೂಡ ಗೊತ್ತಿರುವ ವಿಷಯವೇ.. ಅದಕ್ಕೆ ಸಾಕ್ಷಿ ಅವರ ಫಾರ್ಮ್ ಹೌಸ್… ಇತ್ತಿಚಿಗಷ್ಟೆ ದಾಸ ಕಾಡಿಗೆ ಹೋಗಿ ಒಂದಿಷ್ಟು ಪೋಟೋಗಳನ್ನು ತೆಗೆದುಕೊಂಡು ಬಂದಿದ್ದರು..
ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯೂ ಆಗಿರುವ ದರ್ಶನ್ ಅವರು ಆಗಾಗ ಅರಣ್ಯ ಸಂಚಾರಕ್ಕೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಪ್ರಾಣಿ-ಪಕ್ಷಿಗಳ ಫೋಟೋಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದು, ಇವುಗಳನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು ಅರಣ್ಯ ಇಲಾಖೆಗೆ ನೀಡಲಾಗುತ್ತದೆ ಎಂಬುದು ಈಗಾಗಲೇ ನಿಮಗೆ ತಿಳಿದಿದೆ..ಇದೀಗ ದರ್ಶನ್ ಅವರು ಸೆರೆಹಿಡಿದ ಫೋಟೋಗಳು ದುಬಾರಿ ಬೆಲೆಗೆ ಮಾರಾಟವಾಗುತ್ತಿದ್ದು, ಕೆಲ ದಿನಗಳ ಹಿಂದೆ ನಿರ್ಮಾಪಕ ಉಮಾಪತಿ 10000 ರೂ. ನೀಡಿ ಫೋಟೋ ಒಂದನ್ನು ಖರೀದಿಸಿ ಅದನ್ನು ನಟ ಶ್ರೀಮುರಳಿ ಅವರಿಗೆ ಗಿಫ್ಟ್ ಆಗಿ ಕೊಟ್ಟಿದ್ದರು… ಇದೀಗ ಹಾಸ್ಯ ನಟ ಚಿಕ್ಕಣ್ಣ, ದರ್ಶನ್ ಅವರು ಸೆರೆಹಿಡಿದಿದ್ದ ಗಜರಾಜನ ಫೋಟೋ ಒಂದಕ್ಕೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ನೀಡಿ ಖರೀದಿ ಮಾಡಿದ್ದಾರೆ... ಈ ಫೋಟೋವನ್ನು ದರ್ಶನ್ ಅವರ ಕೈಯಿಂದಲೇ ಚಿಕ್ಕಣ್ಣ ಪಡೆದುಕೊಂಡಿರುವುದೇ ವಿಶೇಷ.. ಈ ಕುರಿತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡಿದ್ದು, ನಮ್ಮ ಚಿಕ್ಕಣ್ಣ ನಾನು ಸೆರೆಹಿಡಿದಿದ್ದ ಆನೆಯ ಫೋಟೋವನ್ನು ಒಂದು ಲಕ್ಷ ರೂಪಾಯಿಗಳನ್ನು ನೀಡಿ ಖರೀದಿ ಮಾಡಿರುವುದು ಶ್ಲಾಘನೀಯ. ಅವರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ನನ್ನ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.. ಈ ಹಣವನ್ನೆಲ್ಲಾ ದರ್ಶನ್ ಅರಣ್ಯ ಇಲಾಖೆಯ ನೆರವಿಗೆ ನೀಡುತ್ತಾರೆ.. ದರ್ಶನ್ ಗೆ ಸಮಾಜಸೇವೆ ಮಾಡುವುದು ಎಷ್ಟು ಇಷ್ಟ ಎಂಬುದು ಇದರಿಂದಲೇ ತಿಳಿಯುತ್ತದೆ.
Comments