ಚುನಾವಣೆ ನಂತರ ಪ್ರಥಮ ಬಾರಿಗೆ ಸಕ್ಕರೆ ನಾಡಿಗೆ ಎಂಟ್ರಿ ಕೊಡ್ತಿದ್ದಾರೆ ರಾಕಿ ಬಾಯ್..!!!

ಮಂಡ್ಯ ಲೋಕಸಭಾ ಚುನಾವಣೆಯು ಹೆಚ್ಚು ಕುತೂಹಲವನ್ನು ಕೆರಳಿಸಿತ್ತು.. ಸ್ಯಾಂಡಲ್ ವುಡ್’ನ ಸ್ಟಾರ್ ಗಳಾದ ದರ್ಶನ್ ಮತ್ತು ಯಶ್ ಮಂಡ್ಯ ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಪರ ಕ್ಯಾಂಪೆನ್ ಮಾಡಿದ್ದು ರಾಜಕೀಯ ವಲಯದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು… ಲೋಕಸಭಾ ಚುನಾವಣೆ ನಂತರ ರಾಕಿಂಗ್ ಸ್ಟಾರ್ ಯಶ್ ಇದೇ ಮೊದಲ ಬಾರಿಗೆ ಮಂಡ್ಯಗೆ ಆಗಮಿಸಲಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆರೆಮೇಗಳದೊಡ್ಡಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಅಭಿಮಾನಿಯೊಬ್ಬರ ಮನೆಯ ಗೃಹಪ್ರವೇಶ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಆಗಮಿಸಲಿದ್ದಾರೆ ಎಂದು ಉಚ್ಚಾಟಿತ ಕೆಪಿಸಿಸಿ ಸದಸ್ಯ, ಸುಮಲತಾ ಬೆಂಬಲಿಗ ಇಂಡವಾಳು ಸಚ್ಚಿದಾನಂದ ತಿಳಿಸಿದ್ದಾರೆ. ಲೋಕಸಭಾ ಚುನಾವಣೆ ಮುಗಿದ ನಂತರ ಯಶ್ ಮತ್ತು ದರ್ಶನ್ ಮಂಡ್ಯಕ್ಕೆ ಬರುವುದಿಲ್ಲ ಎಂದು ಜೆಡಿಎಸ್ ನಾಯಕರು ಪದೇ ಪದೇ ಹೇಳುತ್ತಿದ್ದರು. ಇದೀಗ ಯಶ್ ಅಭಿಮಾನಿಯ ಮನೆಯ ಗೃಹ ಪ್ರವೇಶಕ್ಕೆ ಬರುತ್ತಿದ್ದಾರೆ. ಅದೇ ರೀತಿ ಮಂಡ್ಯ ಜನರ ಕಷ್ಟ ಹಾಗೂ ಸುಖಗಳಿಗೆ ಯಶ್ ಹಾಗೂ ದರ್ಶನ್ ಸ್ಪಂದಿಸುತ್ತಾರೆ. ತಮ್ಮ ಕೆಲಸದ ನಡುವೆ ಬಿಡುವಾದಾಗ ಯಶ್ ಹಾಗೂ ದರ್ಶನ್ ಮಂಡ್ಯಕ್ಕೆ ಬರುತ್ತಾರೆ. ಇಲ್ಲಿಯ ಜನರ ಜೊತೆ ಇರುತ್ತಾರೆ ಎಂದು ಸಚ್ಚಿದಾನಂದ ತಿಳಿಸಿದ್ದಾರೆ. ಯಶ್ ಮತ್ತು ದರ್ಶನ್ ಮತ್ತು ಜನರ ಕಷ್ಟಗಳಿಗೆ ಯಾವಾಗಲೂ ಕೂಡ ಸ್ಪಂದಿಸುತ್ತಿರುತ್ತಾರೆ…
Comments