ಈ ಫೋಟೋ ನನ್ನದಲ್ಲ ಅಂದ್ರು ರಾಕಿಂಗ್ ಸ್ಟಾರ್..!! ಹಾಗಾದ್ರೆ ಈ ಪೋಟೋ ಯಾರದ್ದು…?

15 May 2019 11:22 AM | Entertainment
1136 Report

ಸ್ಯಾಂಡಲ್ ವುಡ್ ಅನ್ನು ಧೂಳ್ ಎಬ್ಬಿಸಿದ ಸಿನಿಮಾಗಳಲ್ಲಿ ಪ್ರಮುಖ ಸ್ಥಾನ ಗಿಟ್ಟಿಸಿಕೊಂಡಿರುವುದರಲ್ಲಿ ಕೆಜಿಎಫ್ ಅಗ್ರಸ್ಥಾನದಲ್ಲಿದೆ.. ಇಡಿ ದಕ್ಷಿಣ ಭಾರತವೇ ಒಮ್ಮೆ ಸ್ಯಾಂಡಲ್ ವುಡ್ ಕಡೆ ತಿರುಗಿ ನೋಡುವಂತೆ ಮಾಡಿತ್ತು… ಇದೀಗ ಕೆಜಿಎಫ್ 2 ಸಿನಿಮಾ ಸೆಟ್ಟೇರಿದೆ… ಕೆಲವು ದಿನಗಳ ಹಿಂದಷ್ಟೆ ಸಾಮಾಜಿ ಜಾಲತಾಣಗಳಲ್ಲಿ ಒಂದು ಪೋಟೋ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ನಟ ಯಶ್ ಅವರ ಒಂದು ಫೋಟೋ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಯಶ್ ನ  ಹೊಸ ವೇಷ ನೋಡಿದ್ದ ಅಭಿಮಾನಿಗಳು ಯಶ್ ಪೋಟೋಗೆ ಫಿದಾ ಆಗಿದ್ದರು..

ಉದ್ದ ಗಡ್ಡ ಹಾಗೂ ಉದ್ದ ಕೂದಲು ಬಿಟ್ಟು ಕನ್ನಡಿ ಮುಂದೆ ನಿಂತು ತೆಗೆದ ಫೋಟೋ ಸಖತ್ ಆಗಿತ್ತು. ಈ ಫೋಟೋದಲ್ಲಿ ಯಶ್ ಪೋಸ್ ಕೆಜಿಎಫ್ 2 ಚಿತ್ರದ್ದು ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು.. ಆದರೆ ಇದೀಗ ಆ ಪೋಟೋದಲ್ಲಿ ಇರುವುದು ನಾನಲ್ಲ ಎಂದು ಯಶ್ ತಿಳಿಸಿದ್ದಾರೆ..ಯಶ್ ಆ ಪೋಟೋ ನನ್ನದಲ್ಲ ಎಂದ ಮೇಲೆ, ಸೇಮ್ ಟು ಸೇಮ್ ಯಶ್ ರೀತಿಯೇ ಇರುವ ಆ ಫೋಟೋ ಯಾರದ್ದು ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಕೂಡ ಮೂಡಿರುವುದಂತೂ ಸುಳ್ಳಲ್ಲ.. 'ಕೆಜಿಎಫ್ ಚಾಪ್ಟರ್ 2' ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ವಿಜಯ ಕಿರಗಂದೂರು ನಿರ್ಮಾಣ ಇದೆ. ಮೊದಲ ಅಧ್ಯಾಯದಲ್ಲಿ ಕೆಲಸ ಮಾಡಿದ್ದ ತಂಡವೇ ಇಲ್ಲಿಯೂ ಮುಂದುವರೆಯಲಿದೆ. ಈ ಸಿನಿಮಾವು ಕೂಡ ಕೆಜಿಎಫ್ ಅಷ್ಟೆ ಜೋರಾಗಿ ಅಬ್ಬರಿಸಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ..

Edited By

Manjula M

Reported By

Manjula M

Comments