ರೀಲ್’ನಲ್ಲಿ ಬೆಸ್ಟ್ ಜೋಡಿಯಾಗಿದ್ದವರು ರಿಯಲ್ ನಲ್ಲಿಯೂ ಬೆಸ್ಟ್ ಜೋಡಿಯಾದ್ರು
ಇತ್ತಿಚಿಗೆ ಬಣ್ಣದ ಜಗತ್ತಿನ ಸಾಕಷ್ಟು ಕಲಾವಿದರು ಸಪ್ತಪದಿ ತುಳಿಯುತ್ತಿದ್ದಾರೆ… ಆ ಗುಂಪಿಗೆ ಇದೀಗ ಕುಲವಧು ಧಾರಾವಾಹಿ ಖ್ಯಾತಿಯ ವಚನಾ ಅಲಿಯಾಸ್ ಅಮೃತಾ ಇದೀಗ ಮದುವೆಯಾಗಿದ್ದಾರೆ.. ನಟಿ ಅಮೃತಾ ತಮ್ಮ ಬಹುದಿನಗಳ ಗೆಳೆಯ ಹಾಗೂ ಕಿರುತೆರೆ ನಟ ರಘು ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ಇವರಿಬ್ಬರ ಮದುವೆ ಬೆಂಗಳೂರಿನಲ್ಲಿ ಮೇ 12 ಮತ್ತು 13 ರಂದು ಅದ್ದೂರಿಯಾಗಿ ನಡೆದಿದೆ.. ಭಾನುವಾರ ರಂದು ಅಮೃತಾ ಮತ್ತು ರಘು ಅವರ ಆರತಕ್ಷತೆ ಕಾರ್ಯಕ್ರಮ ನಡೆದಿದೆ.
ಮನೆಯಲ್ಲಿ ನಿಗಧಿ ಮಾಡಿದಂತೆ ಅಮೃತಾ-ರಘು ಬ್ರಾಹ್ಮಿಣ್ ಮತ್ತು ಗೌಡರ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ರಘು ಮತ್ತು ಅಮೃತಾ ಅವರು ಪರಸ್ವರ ಪ್ರೀತಿಸಿ ಮನೆಯಲ್ಲಿ ಒಪ್ಪಿಸಿ ಮದುವೆಯಾಗಿದ್ದಾರೆ. ಇವರಿಬ್ಬರು ಕೂಡ ಈ ಹಿಂದೆ ಒಟ್ಟಿಗೆ `ಮಿ. ಆ್ಯಂಡ್ ಮಿಸಸ್ ರಂಗೇಗೌಡ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರ ಮನೆ ಮನ ಗೆದ್ದಿದ್ದರು.. ಇವರಿಬ್ಬರು ಐಶ್ವರ್ಯ ಮತ್ತು ರಂಗೇಗೌಡ ಪಾತ್ರವನ್ನು ಮಾಡುತ್ತಿದ್ದರು.. ಅಷ್ಟೇ ಅಲ್ಲದೇ ಇವರಿಬ್ಬರಿಗೆ `ಬೆಸ್ಟ್ ಜೋಡಿ’ ಅವಾರ್ಡ್ ಕೂಡ ಬಂದಿತ್ತು. ಅದಾಗಲೇ ಆ ಜೋಡಿಗೆ ಬೆಸ್ಟ್ ಅವಾರ್ಡ್ ಬಂದಿದೆ.. ಇದೀಗ ನಿಜ ಜೀವನದಲ್ಲಿ ಸಪ್ತಪದಿ ತುಳಿದು ಮತ್ತೊಮ್ಮೆ ಬೆಸ್ಟ್ ಜೋಡಿ ಆಗಿದ್ದಾರೆ. ಅವರಿಬ್ಬರ ಜೋಡಿಗೆ ಎಲ್ಲಾ ಕಲಾವಿದರು ಶುಭಾಷಯ ಕೋರಿದ್ದಾರೆ.
Comments