‘ಸೂಜಿದಾರ’ದ ಬೆಡಗಿ ಹರಿಪ್ರಿಯಾ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ಯಾಕೆ..?
ಇತ್ತಿಚಿಗೆ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಹರಿಪ್ರಿಯಾ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ…ಇತ್ತಿಚಿಗಷ್ಟೆ ನಟಿ ಹರಿಪ್ರಿಯಾ ಅಭಿನಯಿಸಿದ್ದ ಸೂಜಿದಾರ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು.. ಆದರೆ ಸಿನಿಮಾ ನೋಡಿದ ಹರಿಪ್ರಿಯಾ ಅಭಿಮಾನಿಗಳು ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ಹಾಗಾಗಿ ಹರಿಪ್ರಿಯಾ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.. ಎಲ್ಲಾ ಸಿನಿಮಾಗಳಲ್ಲಿಯೂ ಕೂಡ ಹರಿಪ್ರಿಯಾ ಅವರನ್ನು ಮೆಚ್ಚಿಕೊಂಡಿದ್ದ ಅಭಿಮಾನಿಗಳು ಕೊಂಚ ಈ ಸಿನಿಮಾದಿಂದ ಬೇಸರಗೊಂಡಿದ್ದಾರೆ.
ಇದೀಗ ಹರಿಪ್ರಿಯಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಈ ಸಿನಿಮಾದ ಬಗ್ಗೆ ವಿವರವಾಗಿ ಬರೆದುಕೊಂಡಿದ್ದು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ. ಪ್ರತಿ ಭಾನುವಾರ ಅಭಿಮಾನಿಗಳನ್ನು ಭೇಟಿ ಮಾಡುವ ಹರಿಪ್ರಿಯಾ ಅವರು ಈ ಬಾರಿ ಹೆಚ್ಚು ಬೇಸರಗೊಂಡಿದ್ದಾರೆ. ಸೂಜಿದಾರ ಸಿನಿಮಾ ಕುರಿತು ಅಭಿಮಾನಿಗಳು ಬಹಳ ಬೇಸರವನ್ನು ವ್ಯಕ್ತಪಡಿಸಿದ್ದು, ಸಿನಿಮಾ ಬಗ್ಗೆ ಹೆಚ್ಚು ಕುತೂಹಲ ಹೊಂದಿದ್ದವರಿಗೆ ನಿಜಕ್ಕೂ ನಿರಾಸೆಯಾಗಿದೆ. ನಿಜ ಹೇಳಬೇಕೆಂದರೆ ನನಗೂ ಮೊದಲ ಬಾರಿ ಸಿನಿಮಾ ನೋಡಿದ ವೇಳೆ ಇದೇ ರೀತಿಯ ಅಭಿಪ್ರಾಯ ಮೂಡಿತ್ತು. ಆದರೆ ಮೊದಲು ನನಗೆ ಚಿತ್ರತಂಡ ಹೇಳಿದ ಕಥೆ ಇದಾಗಿರಲಿಲ್ಲ. ಕೆಲ ವಿಚಾರಗಳನ್ನು ಅನಗತ್ಯವಾಗಿ ಈ ಸಿನಿಮಾದಲ್ಲಿ ಸೇರಿಸಿದ್ದಾರೆ. ಆದರೆ ನಿರ್ಮಾಪಕರ ಒಳಿತಿಗಾಗಿ ನಾನು ಏನು ಮಾತನಾಡದೆ ಸುಮ್ಮನಾದೆ. ನನ್ನ ಕಡೆಯಿಂದ ನಾನು ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತಿದ್ದು, ಇಂತಹ ತಪ್ಪನ್ನು ಮತ್ತೆ ಮಾಡಲ್ಲ ಎಂದಿದ್ದಾರೆ. ಮುಂದಿನ ಸಿನಿಮಾಗಳಲ್ಲಿ ನೀವು ಮೆಚ್ಚಿಕೊಳ್ಳುವಂತಹ ಸಿನಿಮಾ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ಸಿನಿಮಾದಲ್ಲಿ ನೀವು ಉತ್ತಮವಾಗಿ ಅಭಿನಯಿಸಿದ್ಧೀರ ಎಂದು ಹರಿಪ್ರಿಯಾಗೆ ಬೆಂಬಲ ಸೂಚಿಸಿದ್ದಾರೆ.
Comments