ಅಂತೂ ಇಂತೂ ‘ಜೋಡೆತ್ತು’ ಟೈಟಲ್ ಫಿಕ್ಸ್..!! ಈ ಸಿನಿಮಾದಲ್ಲಿ ಡಿ ಬಾಸ್ ಗೆ ತಮ್ಮನಾಗ್ತಾರ ಯಶ್.!!!
ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಮಂಡ್ಯದಲ್ಲಿ ಕೇಳಿಬಂದ ಕೆಲವೊಂದು ಪದಗಳು ತುಂಬಾ ಪೇಮಸ್ ಆಗಿಬಿಟ್ಟಿವೆ..ಅದರಲ್ಲಿ ನಿಖಿಲ್ ಎಲ್ಲಿದೀಯಪ್ಪ, ಜೋಡೆತ್ತು, ಕಳ್ಳೆತ್ತು ಎನ್ನುವ ಪದಗಳು ಹಾಗಾಗ ಕೇಳಿ ಬರುತ್ತಿದ್ದವು.. ಇದೀಗ ಆ ಪದಗಳೇ ಸಿನಿಮಾ ಟೈಟಲ್ ಆಗುತ್ತಿವೆ… ಅದರಲ್ಲೂ ನಿಖಿಲ್ ಎಲ್ಲಿದೀಯಪ್ಪ ಮತ್ತು ಜೋಡೆತ್ತು ಎನ್ನುವ ಪದವಂತೂ ಎಲ್ಲಡೆ ಕೇಳಿ ಬರುತ್ತಿತ್ತು.. ಅಷ್ಟೆ ಅಲ್ಲದೇ ಆ ಎರಡು ಟೈಟಲ್ ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಕೂಡ ಆಗಿತ್ತು..
ಡಿಬಾಸ್ ಕ್ಯಾಂಪೇನ್ ಮಾಡುವ ಸಮಯದಲ್ಲಿ ಜೋಡೆತ್ತು ಎನ್ನುವ ಪದ ಅವರ ಬಾಯಿಂದ ಬಂತೋ ಅವಾಗಿನಿಂದ ಜೋಡೆತ್ತು ಎನ್ನುವ ಪದ ಟ್ರೆಂಡ್ ಕ್ರಿಯೆಟ್ ಮಾಡಿತ್ತು.. ಈ ಹೆಸರಿನ ಸಿನಿಮಾವನ್ನು ಮಾಡಲು ಅನೇಕ ನಿರ್ಮಾಪಕರು ಅಂದು ಕೊಂಡರು ಕೂಡ ಆ ಟೈಟಲ್ ಇದೀಗ ನಿರ್ಮಾಪಕ ಎಂ.ಜಿ.ರಾಮಮೂರ್ತಿಯವ ಪಾಲಿಗೆ ದಕ್ಕಿದೆ. ದರ್ಶನ್ ಮತ್ತು ನಿರ್ಮಾಪಕ ಎಂ.ಜಿ.ರಾಮಮೂರ್ತಿಯವರಿಗೆ ಒಳ್ಳೆ ಬಾಂಧವ್ಯವಿದೆ. ದರ್ಶನ್ ಹೀರೋ ಆಗಿ ನಟಿಸಿದ ಚೊಚ್ಚಲ ಸಿನಿಮಾ ಮೆಜೆಸ್ಟಿಕ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದವರು ಇದೇ ರಾಮಮೂರ್ತಿಯವರು. ಇದೇ ಜೋಡಿ 2004ರಲ್ಲಿ ಧರ್ಮ ಅನ್ನೋ ಸಿನಿಮಾವನ್ನು ಮಾಡಿತ್ತು. ಇದಾದ ನಂತರ ಈ ನಿರ್ಮಾಪಕ ಮತ್ತು ನಟರು ಒಂದಾಗಲಿಲ್ಲ.ಆದರೆ ಯಾವಾಗ ಮೆಜೆಸ್ಟಿಕ್ ಬಂದು 15 ವರ್ಷ ಆಯ್ತೋ ಆಗಲೇ ಮತ್ತೊಮ್ಮೆ ಇಬ್ಬರು ಒಂದಾಗಿ ಕೆಲಸ ಮಾಡುವ ಮನಸು ಮಾಡಿದರು. ಈಗ ಆ ಕಾಲ ಮತ್ತೆ ಸನಿಹವಾಗುವ ಲಕ್ಷಣಗಳು ಕಾಣಿಸುತ್ತಿವೆ. ಈಗಾಗಲೇ ಕಥೆ ಸಿದ್ದವಾಗಿದ್ದು ದರ್ಶನ್ ಮತ್ತು ಯಶ್ ಒಟ್ಟಿಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರ ಎಂಬುದೇ ಸದ್ಯದ ಪ್ರಶ್ನೆ… ಒಂದು ವೇಳೆ ಯಶ್ ದರ್ಶನ್ ಅವರ ತಮ್ಮನ ಪಾತ್ರವನ್ನು ಮಾಡುತ್ತಾರ ಅನ್ನೋದು ಮತ್ತೊಂದು ಪ್ರಶ್ನೆ…ಒಂದು ವೇಳೆ ಈ ಜೋಡೆತ್ತುಗಳು ಒಂದಾದರೆ ಬಾಕ್ಸ್ ಆಪೀಸ್ ಅನ್ನು ಧೂಳ್ ಎಬ್ಬಿಸಿಸೋದು ಗ್ಯಾರೆಂಟಿ..
Comments