ಬಸಣ್ಣಿ ಅಲಿಯಾಸ್ ತಾನ್ಯ ಹೋಪ್ ಬಿಕಿನಿ ಪೋಟೋ ವೈರಲ್..!!

ಸ್ಯಾಂಡಲ್ ವುಡ್ ಗೆ ಬೇರೆ ಭಾಷೆಯ ನಾಯಕಿರು ಬಂದು ನೆಲೆಯೂರುವುದು ಸ್ವಲ್ಪ ಕಷ್ಟವೇ ಸರಿ.. ಪರಭಾಷೆಯಿಂದ ಬಂದು ಒಂದು ಸಿನಿಮಾ ಮಾಡಿ ವಾಪಸ್ ಹೊರಟು ಹೋಗ್ತಾರೆ.. ಕೆಲವರು ಮಾತ್ರ ಇಲ್ಲಿ ಭರವಸೆಯ ನಾಯಕಿಯರಾಗುತ್ತಾರೆ. ಅದರಲ್ಲಿ ತಾನ್ಯಹೋಪ್ ಕೂಡ ಒಬ್ಬರು.. ಯಜಮಾನ ಸಿನಿಮಾದಲ್ಲಿ ಬಸಣ್ಣಿ ಬಾ ಹಾಡಿಗೆ ಮಸ್ತ್ ಹೆಜ್ಜೆ ಹಾಕಿದ ತಾನ್ಯ ಪಡ್ಡೆ ಹುಡುಗರ ನಿದ್ದೆ ಕದ್ದಿದಂತು ಸುಳ್ಳಲ್ಲ.. ಅತೀ ಕಡಿಮೆ ಅವಧಿಯಲ್ಲಯೇ ತನ್ನದೊಂದು ಬಳಗವನ್ನು ಕಟ್ಟಿಕೊಂಡಿದ್ದಾರೆ ತಾನ್ಯ ಹೋಪ್.
ತಾನ್ಯಾ ಹೋಪ್ ಸ್ಯಾಂಡಲ್ ವುಡ್ ನ ಬಹುಬೇಡಿಕೆ ನಟಿ. ಇದೀಗ ಹಾಟ್ ಲುಕ್ ಮೂಲಕ ಮತ್ತೊಮ್ಮೆ ಹುಡುಗರ ನಿದ್ದೆಗೆಡಿಸಿದ್ದಾರೆ. ಯಾವಾಗಲೂ ಬ್ಯೂಟಿಯಿಂದ ಗಮನ ಸೆಳೆಯುವ ತಾನ್ಯಾ ಸ್ವಿಮ್ಮಿಂಗ್ ಪೂಲ್ ವೊಂದರಲ್ಲಿ ಹ್ಯಾಪಿ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡುತ್ತಾ ಬಿಕಿನಿಯಲ್ಲಿ ಸಖತ್ ಆಗಿಯೇ ಪೋಸ್ ಕೊಟ್ಟಿದ್ದಾರೆ. ಹಸಿರು ಬಣ್ಣದ ಬಿಕಿನಿಯಲ್ಲಿ ಮಿಂಚುತ್ತಿದ್ದಾರೆ.. ತಾನ್ಯಾ ಹೋಪ್ ನ ಈ ಫೋಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಇದೇ ತಿಂಗಳು ಅಂದರೆ ಮೇ 29 ಕ್ಕೆ ಅಭಿಷೇಕ್ ಅಂಬರೀಶ್ ಮತ್ತು ತಾನ್ಯ ಹೋಪ್ ಅಭಿನಯಿಸಿರುವ ಅಮರ್ ಸಿನಿಮಾ ಬಿಡುಗಡೆಯಾಗುತ್ತಿದೆ. ಬಸಣ್ಣಿಯಾಗಿ ಮನಗೆದ್ದ ತಾನ್ಯ ಅಮರ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಭರವಸೆಯ ನಾಯಕಿಯಾಗ್ತಾರ ಅನ್ನೋದನ್ನ ಕಾದು ನೋಡಬೇಕಿದೆ.
Comments