15 ದಿನದ ಸಿನಿಮಾ ಶೂಟಿಂಗ್’ಗೆ 2ಕೋಟಿ ಸಿಗುತ್ತಂತೆ ಈ ನಟಿಗೆ..!?

11 May 2019 12:25 PM | Entertainment
518 Report

ಸಿನಿಮಾ ಇಂಡಸ್ಟ್ರಿಯಲ್ಲಿ ಸಾಮಾನ್ಯವಾಗಿ ಹೀರೋಗಳಿಗೆ ಹೆಚ್ಚು ಸಂಭಾವನೆ ಸಿಗುತ್ತದೆ… ನಟಿಯರಿಗೆ ಮಾತ್ರ ಹೀರೋಗಳಿಗಿಂತ ಕಡಿಮೆ ಸಂಭಾವನೆ ಇರುತ್ತದೆ.. ಆದರೆ ಬಾಲಿವುಡ್ ನಟಿಯರ ಸಂಭಾವನೆ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ.  ಕೋಟಿ ಕೋಟಿ ಸಂಭಾವನೆ ಪಡೆಯುವವರ ಸಂಖ್ಯೆ ಮಾತ್ರ ಕಡಿಮೆ ಎನ್ನಬಹುದು.. ಆದರೆ ನಟರಿಗೆ ಮಾತ್ರ ಮಾತ್ರ ಕೋಟಿ ಕೋಟಿ ಸಂಭಾವನೆ ಸಿಗುತ್ತದೆ. ಆದರೆ ಇಲ್ಲೊಬ್ಬಳು ನಟಿ ಕೇವಲ 15 ದಿನದ ಶೂಟಿಂಗ್ ಗಾಗಿ ಪಡೆದ ಸಂಭಾವನೆ ಕೇಳುದ್ರೆ ಶಾಕ್ ಆಗ್ತೀರಾ..

ಎಸ್.. ಇಲ್ಲೊಬ್ಬ ನಟಿ ಕೇವಲ 15 ದಿನದ ಶೂಟಿಂಗ್ ಗಾಗಿ ಸುಮಾರು 2 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬುದು ಸಿನಿ ದುನಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ..  ಸದ್ಯ ಮಹೇಶ್ ಬಾಬು ಅಭಿನಯದ ಮಹರ್ಷಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಪೂಜಾ ಹೆಗ್ಡೆ ತಮ್ಮ ಮುಂದಿನ ಸಿನಿಮಾದಲ್ಲಿ ಸುಮಾರು 2 ಕೋಟಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರಂತೆ. 'ಗಬ್ಬರ್ ಸಿಂಗ್' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಹರೀಶ್ ಶಂಕರ್ ವಾಲ್ಮಿಕಿ ಎಂಬ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾಗೆ ಪೂಜೆ ಹೆಗ್ಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. ನಾಯಕಿ ಪಾತ್ರವನ್ನ ಕೇವಲ 15 ದಿನದಲ್ಲಿ ಶೂಟಿಂಗ್ ಮಾಡಿ ಮುಗಿಸುವ ಪ್ಲಾನ್ ನಿರ್ದೇಶಕರಾದ್ದಾಗಿದೆ., ಅದಕ್ಕಾಗಿ 2 ಕೋಟಿ ನೀಡಲಾಗುತ್ತಿದೆಯಂತೆ ಎಂಬ ಸುದ್ದಿ ಕೇಳುತ್ತಿದ್ದಂತೆ ನಿರ್ದೇಶಕ ಹರೀಶ್ ಶಂಕರ್ ಅಲ್ಲೆಗಳೆದಿದ್ದಾರೆ. ಪೂಜಾ ಹೆಗ್ಡೆ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು. ಅದರಲ್ಲಿ ಸತ್ಯವಿಲ್ಲ ಎಂದು ಟ್ವೀಟ್ ಮಾಡಿ ಗಾಸಿಪ್ ಗೆ ಅಂತ್ಯವಾಡಿದ್ದಾರೆ. ಒಟ್ಟಾರೆಯಾಗಿ 15 ದಿನದಲ್ಲಿ ನಾಯಕಿಯ ಪಾತ್ರದ ಶೂಟಿಂಗ್ ಮಾಡಿ ಮುಗಿಸುವ ಪ್ಲ್ಯಾನ್ ಇದ್ದು ನಟಿಗೆ ಎಷ್ಟು ಸಂಭಾವನೆ ಕೊಡಲಾಗುತ್ತದೆ ಎಂಬುದನ್ನು ಎಲ್ಲಿಯೂ ತಿಳಿಸಿಲ್ಲ.. ಇದೊಂದು ಗಾಳಿ ಸುದ್ದಿ ಎಂದು ನಿರ್ದೇಶಕರು ಸ್ಪಷ್ಟ ಪಡಿಸಿದ್ದಾರೆ.

Edited By

Manjula M

Reported By

Manjula M

Comments