ರಾಧ ಕಲ್ಯಾಣ ಖ್ಯಾತಿಯ ನಟ ಚಂದನ್ ಮದುವೆ ಫೋಟೋ ವೈರಲ್!
ಬಿಗ್ ಬಾಸ್ ಚಂದನ್ ಕುಮಾರ್ ಎಲ್ಲರಿಗೂ ಗೊತ್ತೆ ಇದೆ..ಇದೀಗ ಅವರು ಮದುವೆಯಾಗಿರುವ ರೀತಿಯಲ್ಲಿ ನಿಂತು ತೆಗಿಸಿಕೊಂಡ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.. ಫೋಟೋ ನೋಡಿ ಅಭಿಮಾನಿಗಳು ಕನ್ ಫ್ಯೂಸ್ ಆಗಿದ್ದಾರೆ. ಈ ಫೋಟೋದಲ್ಲಿ ನಟಿ ಆಯೇಶಾ ಜೊತೆ ಮದುವೆ ಆಗಿರುವ ರೀತಿಯಲ್ಲಿ ಚಂದನ್ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಚಂದನ್ ಅಯ್ಯೋ ಚಂದನ್ ಮದುವೆಯಾಗಿ ಬಿಟ್ರಾ.. ಅಂದುಕೊಳ್ಳುತ್ತಿದ್ದೀರಾ.. ಹೌದು ಚಂದನ್ ಮದುವೆಯಾಗಿದ್ದಾರೆ.. ಆದ್ರೆ ನಿಜಜೀವನದಲ್ಲಿ ಅಲ್ಲ… ಬದಲಿಗೆ ಧಾರವಾಹಿಯಲ್ಲಿ…
ನಟ ಚಂದನ್ ಕನ್ನಡದಲ್ಲಿ ಸಾಕಷ್ಟು ಧಾರವಾಹಿಯಲ್ಲಿ ಕಾಣಿಸಿಕೊಂಡು ಜನ ಮೆಚ್ಚುಗೆಯನ್ನು ಗಳಿಸಿದ್ದಾರೆ.. ಇದೀಗ ಚಂದನ್ ತೆಲುಗಿನ ‘ಸಾವಿತ್ರಮ್ಮಗಾರಿ ಅಬ್ಬಾಯಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ... ಈ ಸೀರಿಯಲ್‍ನಲ್ಲಿ ಚಂದನ್‍ಗೆ ಜೋಡಿಯಾಗಿ ನಟಿ ಆಯೇಶಾ ಅಭಿನಯಿಸುತ್ತಿದ್ದಾರೆ.. ಹೀಗಾಗಿ ಈ ಧಾರಾವಾಹಿಯಲ್ಲಿ ಇವರಿಬ್ಬರು ಗಂಡ-ಹೆಂಡತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಂದನ್ ಫೋಟೋಗೆ ‘ಸಾವಿತ್ರಮ್ಮಗಾರಿ ಅಬ್ಬಾಯಿ’ ಧಾರಾವಾಹಿಯ ಮೊದಲ ಫೋಟೋ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಚಂದನ್ ಫೋಟೋ ಪೋಸ್ಟ್ ಮಾಡಿದ ತಕ್ಷಣ ಅಭಿಮಾನಿಗಳು ಸೂಪರ್ ಜೋಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಕನ್ನಡದಲ್ಲಿಯೂ ಸರ್ವ ಮಂಗಳ ಮಾಂಗಲ್ಯೆ ಎನ್ನುವ ಧಾರವಾಹಿಯಲ್ಲಿಯೂ ಕೂಡ ಅಭಿನಯಿಸುತ್ತಿದ್ದಾರೆ. ರಾಧ ಕಲ್ಯಾಣ, ಲಕ್ಷ್ಮಿ ಬಾರಮ್ಮ ಧಾರವಾಹಿಗಳಲ್ಲಿಯೂ ಕೂಡ ಕಾಣಿಸಿಕೊಂಡಿದ್ದರು.
Comments