ಸ್ಮಶಾನವಾಸಿಯಿಂದ ದರ್ಶನ್‍ಗೆ ಬಂತು ಮನಕಲಕುವ ಪತ್ರ..!! ಪತ್ರದಲ್ಲಿ ಅಷ್ಟಕ್ಕೂ ಏನಿದೆ..?
ಸ್ಯಾಂಡಲ್ ವುಡ್ನನ ಬಹು ಬೇಡಿಕೆಯ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾವಾಗಲೂ ಕೂಡ ಮುಂದೆ ಇರುತ್ತಾರೆ.. ಕೇವಲ ನಟನೆಯಲ್ಲಿ ಅಷ್ಟೆ ಅಲ್ಲ..ಕಷ್ಟಕ್ಕೆ ಸ್ಪಂದಿಸುವುದರಲ್ಲಿಯೂ ಕೂಡ ದರ್ಶನ್ ಸದಾ ಮುಂದಿರುತ್ತಾರೆ.. ಕೇವಲ ಸಿನಿಮಾದಲ್ಲಿ ಮಾತ್ರವಲ್ಲ… ಫ್ಯಾನ್ಸ್ ಗಳಿಗೂ ಕೂಡ ಸಣ್ಣದೊಂದು ಭರವಸೆಯನ್ನು ಹುಟ್ಟಿಸಿದ್ದಾರೆ. ದಚ್ಚು ಕೇವಲ ಸಿನಿಮಾ ಸ್ಟಾರ್ ಮಾತ್ರ ಅಲ್ಲ.. ಕಷ್ಟಗಳಿಗೆ ಸ್ಪಂದಿಸುವ ಆಪ್ತರಕ್ಷಕ ಈತ ಎನ್ನುವುದನ್ನು ಈಗಾಗಲೇ ಸಾಕಷ್ಟು ಅಭಿಮಾನಿಗಳು ಒಪ್ಪಿಕೊಂಡಿದ್ದಾರೆ.. ಇದೀಗ ಬೆಂಗಳೂರಿನ ಸ್ಮಶಾನದ ಕೆಲಸಗಾರನೊಬ್ಬ ದರ್ಶನ್ ಮೇಲೆ ಭರವಸೆ ಇಟ್ಟುಕೊಂಡು ಸಹಾಯ ಮಾಡುವಂತೆ ಪತ್ರವೊಂದನ್ನು ಬರೆದಿದ್ದಾನೆ.
ಬೆಂಗಳೂರಿನ ಅಂಥೋನಿ ಸ್ವಾಮಿ ಕಳೆದ 20 ವರ್ಷಗಳಿಂದ ಹೆಣ ಸುಡುವ ಕಾಯಕ ಮಾಡುತ್ತಿದ್ದಾರೆ. ಕಲ್ಲಳ್ಳಿ ಸ್ಮಶಾನದಲ್ಲಿ ಹೆಣ ಸುಡುವ ಕಾಯಕದಲ್ಲಿ ಇಡೀ ಕುಟುಂಬ ತೊಡಗಿಕೊಂಡಿದೆ. ಆದರೆ ಇವರಿಗೆ ಬಿಬಿಎಂಪಿ ನಿಗದಿ ಪಡಿಸಿದ 1 ಸಾವಿರ ವೇತನವನ್ನು ಕಳೆದ ಎಂಟು ವರ್ಷಗಳಿಂದ ನೀಡಿಲ್ಲ. ಸಹಾಯಧನ ನೀಡಿ ಎಂದು ಎಲ್ಲಾ ಅಧಿಕಾರಿಗಳಿಗೆ, ಸಚಿವರುಗಳಿಗೆ ನೀಡಿದರೂ ಪ್ರಯೋಜನವಾಗಿಲ್ಲ. ಆಗ ಅಂಥೋನಿಗೆ ದರ್ಶನ್ ಅವರು ನೆನಪಾಗಿದ್ದಾರೆ. ಮಂಡ್ಯದಲ್ಲಿ ರಾಜಕೀಯ ಮುಖಂಡರ ಚಳಿ ಬಿಡಿಸಿದ ದರ್ಶನ್‍ಗೆ ತನ್ನ ಮಗಳ ಕೈಯಲ್ಲಿ ಪತ್ರ ಬರೆದಿರುವ ಅಂಥೋನಿ ನನ್ನ ಸಂಬಳವನ್ನು ಹೇಗಾದ್ರೂ ಮಾಡಿ ಕೊಡಿಸಿ ಎಂದು ದರ್ಶನ್‍ಗೆ ಮನವಿ ಮಾಡಲಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಮದರೆಯಾಗುತ್ತಿದೆ.. ಹೇಗಾದರೂ ನಮಗೆ ಸಹಾಯ ಮಾಡಿ ಎಂದು ಪತ್ರದಲ್ಲಿ ಬರೆದಿದ್ದಾರೆ. ದರ್ಶನ್ ತನಗೆ ಸಹಾಯ ಮಾಡೇ ಮಾಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿರುವ ಅಂಥೋನಿ ಭಾನುವಾರ ಅವರ ಮನೆ ಬಳಿ ಹೋಗಿ ಪತ್ರ ನೀಡಲಿದ್ದಾರೆ. ದರ್ಶನ್ ಒಂದು ಮಾತು ಹೇಳಿದರೆ ಅಧಿಕಾರಿಗಳು ಕೇಳುತ್ತಾರೆ ಎಂದು ಅಂಥೋನಿ ನಂಬಿಕೆ ಇಟ್ಟಿದ್ದಾರೆ. ಒಟ್ಟಾರೆಯಾಗಿ ದರ್ಶನ್ ಸಿನಿಮಾದಲ್ಲಿ ಮಾತ್ರವಲ್ಲದೆ ಜನ ಸಾಮಾನ್ಯ ಕಷ್ಟಗಳಿಗೆ ಸ್ಪಂದಿಸುತ್ತಾರೆ ಎನ್ನುವುದು ಮತ್ತೆ ಮತ್ತೆ ಸಾಭೀತಾಗುತ್ತಿದೆ.
Comments