ಮದುವೆಯಾಗಿ ಎರಡು ತಿಂಗಳು ಕಳೆದಿಲ್ಲ…ಆಗ್ಲೆ ಸಿದ್ದಾರ್ಥ್’ಗೆ ಎರಡನೆ ಹೆಂಡತಿ..!!?

ಖಾಸಗಿ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಅಗ್ನಿಸಾಕ್ಷಿ ಧಾರವಾಹಿ ತನ್ನದೇ ಅಭಿಮಾಣಿಗಳ ಬಳಗವನ್ನು ಕಟ್ಟಿಕೊಂಡಿದೆ… ಇತ್ತಿಚಿಗಷ್ಟೆ ಹೊಸ ತಿರುವುಗಳನ್ನು ಪಡೆದುಕೊಂಡ ಧಾರವಾಹಿ ಇದೀಗ ಅಭಿಮಾನಿಗಳ ಕೆಂಗೆಣ್ಣಿಗೆ ಗುರಿಯಾಗಿದೆ. ಅಗ್ನಿಸಾಕ್ಷಿ ಸಿದ್ಧಾರ್ಥ್ ರಿಯಲ್ ಲೈಫ್ ನಲ್ಲಿ ಮದುವೆಯಾಗಿ ಇನ್ನೂ ಎರಡು ತಿಂಗಳು ಕಳೆದಿಲ್ಲ. ಆಗಲೇ ಎರಡನೇ ಪತ್ನಿ ಬಂದು ಬಿಟ್ಟಿದ್ದಾಳೆ…
ಅರೇ ಹೌದಾ ಅನ್ಬೇಡಿ.. ಇದು ರಿಯಲ್ ಲೈಫ್ ನಲ್ಲಿ ಅಲ್ಲ ಬದಲಿಗೆ ಧಾರವಾಹಿಯಲ್ಲಿ… ಸಿದ್ಧಾರ್ಥ್ ಗೆ ಎರಡನೇ ಹೆಂಡತಿ ಅಂತ ಹೇಳಿಕೊಂಡು ಮಹಿಳೆಯೊಬ್ಬಳು ಮನೆಗೆ ಎಂಟ್ರಿ ಕೊಟ್ಟಿದ್ದಾಳೆ.. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಇನ್ನೂ ಎಷ್ಟು ದಿನ ಈ ಧಾರವಾಹಿಯನ್ನು ಜನ ನೋಡಬೇಕೋ ಎಂದು ಕೆಲವರು ಗೋಳಾಡಿದ್ದಾರೆ. ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಸಿದ್ಧಾರ್ಥ್ ಗೆ ಜೋಡಿ ಎಂದರೆ ಸನ್ನಿಧಿ. ಇವರಿಬ್ಬರೂ ನಿಜ ಜೀವನದಲ್ಲೂ ಒಂದಾಗಬೇಕು ಎಂದು ಅದೆಷ್ಟೋ ಅಭಿಮಾನಿಗಳ ಕನಸಾಗಿತ್ತು…. ಆದರೆ ಆ ಕನಸು ನನಸಾಗಲಿಲ್ಲ.. ರಿಯಲ್ ಲೈಫ್ ನಲ್ಲಿ ಸಿದ್ಧಾರ್ಥ್ ಬೇರೆ ಹುಡುಗಿಯನ್ನು ಮದುವೆಯಾಗಿದ್ದಾರೆ.. ತೆರೆ ಮೇಲೂ ಮತ್ತೊಬ್ಬ ಪತ್ನಿಯ ಕತೆ ತಂದರೆ ಅಭಿಮಾನಿಗಳು ಸುಮ್ಮನಿರುತ್ತಾರಾ.. ಸಿದ್ಧಾರ್ಥ್ ಪತ್ನಿ ಎಂದು ಹೇಳಿಕೊಂಡು ಮತ್ತೊಬ್ಬ ಮಹಿಳೆಯ ಕ್ಯಾರೆಕ್ಟರ್ ನ್ನು ಧಾರವಾಹಿಯಲ್ಲಿ ತಂದಿದ್ದಕ್ಕೆ ಜನ ನಿರ್ದೇಶಕರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆಯಾಗಿ ಧಾರವಾಹಿ ಸದ್ಯಕ್ಕೆ ಮುಗಿಯುವ ರೀತಿಯಲ್ಲಿ ಕಾಣುತ್ತಿಲ್ಲ… ಅಭಿಮಾನಿಗಳು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Comments