ಸ್ಯಾಂಡಲ್ ವುಡ್ ಪದ್ಮಾವತಿ ವಿರುದ್ಧ ಅಶ್ಲೀಲ ಪೋಸ್ಟ್ : ದೂರು ದಾಖಲು

07 May 2019 11:14 AM | Entertainment
493 Report

ಇತ್ತಿಚೆಗೆ ಮಾಜಿ ಸಂಸದೆ ನಟಿ ರಮ್ಯ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ..ಯಾವಾಗಲು ಪ್ರಧಾನಿ ಮೋದಿಯವರನ್ನು ಟೀಕಿಸುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡುತ್ತಿರುತ್ತಾರೆ. ಅನೇಕ ಬಾರಿ ನೆಟ್ಟಿಗರ ಕೆಂಗಣ್ಣಿಗೂ ಕೂಡ ರಮ್ಯಾ ಗುರಿಯಾಗಿದ್ದಾರೆ.. ಸ್ಯಾಂಡಲ್ ವುಡ್ ನಲ್ಲಿ ಪದ್ಮಾವತಿ ಅಂತಾನೇ ಫೇಮಸ್ ಆದ ಈಕೆಗೆ ಸಾಕಷ್ಟು ಜನರ ವಿರೋಧವು ಕೂಡ ಇದೆ.. ಮೋದಿಯವರ ವಿರುದ್ದ ಯಾವಾಗಲೂ ಟೀಕೆ ಮಾಡುತ್ತಿದ್ದ ನಟಿಯ ಘನತೆಗೆ ಧಕ್ಕೆ ಬರುವಂತಹ ಕೆಲಸ ಇದೀಗ ಆಗಿದೆ.

ಮಾಜಿ ಸಂಸದೆ ಆಗಿರುವ ನಟಿ ರಮ್ಯಾ ಅವರ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಇದ್ದ ಪೋಟೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ ಆರೋಪಿ ವಿರುದ್ಧ ಇದೀಗ ಸೈಬರ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ರಮ್ಯಾ ಪರ ವಕೀಲೆ ಎಚ್‌.ವಿ.ಭವ್ಯ ಅನು ಎಂಬುವರು ನೀಡಿದ ದೂರಿನ ಮೇರೆಗೆ ನವೀನ್‌ ಸಾಗರ್‌ ಎಂಬಾತನ ವಿರುದ್ಧ ಇದೀಗ ಎಫ್‌ಐಆರ್‌ ದಾಖಲಾಗಿದೆ. ರಮ್ಯಾ ಅವರು ನಟಿಸಿದ್ದ ಚಿತ್ರವೊಂದರ ಫೋಟೋವನ್ನು ವಿಕೃತವಾಗಿ ಬಿಂಬಿಸಿ, ಅಶ್ಲೀಲ ಪದಗಳನ್ನು ಬಳಸಿ ನವೀನ್‌ ಸಾಗರ್‌ ಪೋಸ್ಟ್‌ ಮಾಡುವ ಮೂಲಕ ರಮ್ಯಾ ಅವರ ಘನತೆಗೆ ಧಕ್ಕೆ ತರುವ ರೀತಿ ನಡೆದುಕೊಂಡಿರುವುದಾಗಿ ಆರೋಪಿ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದೆ.. ಸೈಬರ್ ಕ್ರೈಂ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Edited By

Manjula M

Reported By

Manjula M

Comments