ಬೆಳಿಗ್ಗೆಯ ಸಮಯದಲ್ಲಿ ಸೀರಿಯಲ್ ನಟಿ…!! ರಾತ್ರಿಯಲ್ಲಿ ಆಟೋ ಚಾಲಕಿ..!! ಬಣ್ಣದ ಬದುಕಿನ ರಿಯಲ್ ಕಥೆ..!!
ಸಿನಿಮಾದಲ್ಲಿಯೋ ಅಥವಾ ಧಾರವಾಹಿಯಲ್ಲಿ ಮಾಡುವ ಕೆಲವೊಂದು ಕಾಲ್ಪನಿಕ ಅನಿಸಿದರೂ ಕೂಡ ನಿಜ ಜೀವನದ ವಾಸ್ತವವೇ ಬೇರೆ ಇರುತ್ತದೆ… ಕೆಲವೊಂದು ಪಾತ್ರಗಳು ಬೇರೆಯವರ ಜೀವನಕ್ಕೆ ಸ್ಫೂರ್ತಿಯಾಗುವುದುಂಟು ..ಇದೀಗ ಇಲ್ಲೊಬ್ಬಳ ನಟಿಯ ಜೀವನವು ಕೂಡ ಬೇರೆಯವರಿಗೆ ಉತ್ತಮ ಉದಾಹರಣೆಯಾಗಿದೆ ಎನ್ನಬಹುದು, ಈ ನಟಿ ಬೆಳ್ಳಿಗೆ ಆದ ಕೂಡಲೇ ಬಣ್ಣ ಹಚ್ಚಿಕೊಂಡು ಕ್ಯಾಮರಾ ಮುಂದೆ ಅಭಿನಯಿಸುತ್ತಾಳೆ. ಇನ್ನೂ ಸಂಜೆ ಆದರೆ ಜೀವನ ನಿರ್ವಹಣೆಗಾಗಿ ಪಾರ್ಟ್ ಟೈಮ್ ಆಟೋ ಓಡಿಸುತ್ತಾಳೆ..
ಈ ನಟಿಯ ಹೆಸರು ಲಕ್ಷ್ಮಿ. ಮರಾಠಿ ಭಾಷೆಯ ಪ್ರಮುಖ ಧಾರವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದರೊಂದಿಗೆ ಜೀವನ ನಿರ್ವಹಣೆಗಾಗಿ ಆಟೋ ಡ್ರೈವರ್ ಆಗಿ ಪಾರ್ಟ್ ಟೈಮ್ ಕೆಲಸ ಮಾಡುತ್ತಾರೆ. ಅಂದರೆ ಬೆಳಿಗ್ಗೆಲ್ಲಾ ಕ್ಯಾಮೆರಾ ಮುಂದಿದ್ದರೆ, ರಾತ್ರಿ ವೇಳೆ ಸವಾರಿಗಾಗಿ ಗ್ರಾಹಕರಿಗಾಗಿ ಕಾಯುತ್ತಿರುತ್ತಾರೆ. ಮರಾಠಿಗರಿಗೆ ಚಿರ ಪರಿಚಿತ ಮುಖವಾಗಿರುವ ಲಕ್ಷ್ಮಿಯನ್ನು ಇದೀಗ ಇಡೀ ಭಾರತಕ್ಕೆ ಪರಿಚಯಿಸಿದ್ದು, ಖ್ಯಾತ ನಟ ಬೊಮ್ಮನ್ ಇರಾನಿ. ಇತ್ತೀಚೆಗೆ ಲಕ್ಷ್ಮಿ ಆಟೋದಲ್ಲಿ ಸವಾರಿ ಹೋಗಿರುವ ವಿಷಯವನ್ನು 'ತ್ರಿ ಈಡಿಯಟ್ಸ್' ಚಿತ್ರ ನಟ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಾನು ಇವತ್ತು ಸೂಪರ್ ಲೇಡಿಯನ್ನು ಭೇಟಿ ಮಾಡಿದೆ. ಆಕೆ ಇತರರಿಗೆ ಮಾದರಿ… ನಾನು ಆಕೆಯನ್ನು ಭೇಟಿಯಾಗಿದ್ದು ನಿಜಕ್ಕೂ ಸಂತೋಷವಾಯಿತು ಎಂದಿದ್ದಾರೆ… ಈಕೆಯೇ ರೀಯಲ್ ಹೀರೋ ಎಂದು ನಟ ಬೊಮ್ಮನ್ ಇರಾನಿ ತಿಳಿಸಿದ್ದಾರೆ.
Comments