“ಅಪ್ಪುಗಿಂತ ಯಶ್ ಚೆನ್ನಾಗಿ ಡ್ಯಾನ್ಸ್ ಮಾಡ್ತಾರೆ” : ಪುನೀತ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಬುಲ್ ಬುಲ್ ಬೆಡಗಿ..!!
ಸ್ಯಾಂಡಲ್ ವುಡ್ ನಲ್ಲಿ ಬುಲ್ ಬುಲ್ ಬೆಡಗಿ ರಚಿತಾ ರಾಮ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಾ ಫುಲ್ ಬ್ಯುಸಿಯಾಗಿದ್ದಾರೆ.. ಇತ್ತಿಚಿಗೆ ರಚಿತಾ ಒಂದಲ್ಲ ಒಂದು ವಿಷಯಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ..ಇದೀಗ ಪುನೀತ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ರಚಿತಾ ರಾಮ್ ಪುನೀತ್ ಸರ್ ಬಳಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಇತ್ತಿಚಿಗಷ್ಟೆ ನಿರೂಪಕಿ ಅನುಶ್ರೀ ಯೂಟ್ಯೂಬ್ ಚಾನಲ್ ಪ್ರಾರಂಭ ಮಾಡಿದ್ದಾರೆ. ಅದರಲ್ಲಿ ಸೆಲೆಬ್ರೆಟಿಗಳ ಸಂದರ್ಶನವೇ ವಿಶೇಷ..!!
ನಿರೂಪಕಿ ಅನುಶ್ರೀ ರಚಿತಾ ರಾಮ್ ಅವರನ್ನು ಸಂದರ್ಶನ ಮಾಡುವ ವೇಳೆ ಯಶ್ ಮತ್ತು ಪುನೀತ್ ಅವರಿಬ್ಬರಲ್ಲಿ ಯಾರು ಉತ್ತಮ ಡ್ಯಾನ್ಸರ್ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.. ಅದಕ್ಕೆ ರಚಿತಾ "ಪುನೀತ್ ರಾಜ್ ಕುಮಾರ್ ಜೊತೆ ಅಭಿನಯಿಸಿದ್ದೇನೆ ರಾಕಿಂಗ್ ಸ್ಟಾರ್ ಅಂತ ಹೇಳಿದ್ದಾರೆ" ಈ ಉತ್ತರವನ್ನು ಕೇಳಿದ ಪುನೀತ್ ಅಭಿಮಾನಿಗಳು ರಚಿತಾ ಮೇಲೆ ಗರಂ ಆಗಿದ್ದಾರೆ.. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಡವ್ ರಾಣಿ ಅಂತಾನೇ ಅಭಿಯಾನವನ್ನು ಶುರು ಮಾಡಿದ್ದಾರೆ. ಅಪ್ಪು ಬಗ್ಗೆ ಮಾತನಾಡಲು ನಿಮಗೆ ಯೋಗ್ಯತೆ ಇಲ್ಲ, ಮೊದಲು ಯಾರು ಡ್ಯಾನ್ಸ್ ಚೆನ್ನಾಗಿ ಮಾಡುತ್ತಾರೆ ಎಂದು ತಿಳಿದುಕೊಂಡು ನಂತರ ಮಾತನಾಡಿ ಎಂದಿದ್ದಾರೆ. ಇನ್ನೂ ಕೆಲವರು ಡವ್ ರಾಣಿ, ಬಕೆಟ್ ರಾಣಿ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.. ಹೀಗಾಗಿ ಅಪ್ಪು ಅಭಿಮಾನಿಗಳು ಅಪ್ಪು ಸರ್ ಬಳಿ ಕ್ಷಮೆ ಕೇಳಲೇ ಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Comments