ನನಗೆ ಲಿಪ್‌ಲಾಕ್ ಸೀನ್ ಬೇಡ ಎಂದ ಕಿರಿಕ್ ಬೆಡಗಿ..!! ಕಾರಣ ಏನ್ ಗೊತ್ತಾ..?
ಸಿನಿಮಾ ಅಂದ ಮೇಲೆ ಕೆಲವು ಸೀನ್ ಗಳು ಕಾಮನ್ ಆಗಿ ಇದ್ದೆ ಇರುತ್ತವೆ… ರೊಮ್ಯಾನ್ಸ್, ಸರಸ,ವಿರಸ ಜೊತೆಗೆ ಲಿಪ್ ಲಾಕ್ ಇಂತಹ ಸೀನ್ ಗಳು ಇದ್ದೆ ಇರುತ್ತವೆ.. ಎಲ್ಲದ್ದಕ್ಕೂ ಒಪ್ಪಿಕೊಂಡರು ಕೆಲವು ನಟಿಯರು ಲಿಪ್ ಲಾಕ್ ಎಂದರೆ ಸ್ವಲ್ಪ ಹಿಂದೆ ಸರಿಯೋದು ಕಾಮನ್.. ಇನ್ನೂ ಕೆಲವರು ತುಂಬ ಬೋಲ್ಡ್ ಆಗಿಯೇ ತೆರೆ ಮೇಲೆ ಲಿಪ್ ಲಾಕ್ ಸೀನ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ..ಆದರೆ ಪ್ರಶ್ನೆ ಬರುವುದು ಲಿಪ್ ಲಾಕ್ ಅಲ್ಲ… ಹೊಸಬರ ಜೊತೆ ಲಿಪ್ ಲಾಕ್ ಮಾಡುವುದು.. ಹೌದು… ಸ್ಟಾರ್ ನಟರ ಸಿನಿಮಾ ಆಗಿದ್ದರೆ ಹಿಂದೆ ಮುಂದೆ ನೋಡದೆ ಲಿಫ್ ಲಾಕ್ ಸೀನ್ ಇರುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದರು,, ಆದರೆ ಹೊಸಬರ ಜೊತೆ ಅಭಿನಯಿಸಲು ಯಾರು ಕೂಡ ಸಿದ್ದರಿಲ್ಲ ಎಂದು ನಟ ರಾಜ್ ಸೂರ್ಯನ್ ತಮ್ಮ ಅಳಲನ್ನು ಹೊರ ಹಾಕಿದರು.
ಮೈ ನೇಮ್ ಈಸ್ ರಾಜಾ ಚಿತ್ರದ ನಾಯಕಿ ಪಾತ್ರ ಸ್ವಲ್ಪ ಬೋಲ್ಡ್ ಆಗಿದೆ. ತೆಲುಗಿನ ಅರ್ಜುನ್ ರೆಡ್ಡಿ ಸಿನಿಮಾದಲ್ಲಿರುವ ನಾಯಕಿಯ ಹಾಗೆ, ಕೆಲವು ಲಿಪ್‌ಲಾಕ್ ಸನ್ನಿವೇಶಗಳು ಇವೆ. ಈ ಪಾತ್ರಕ್ಕೆ ನಾವು ಕನ್ನಡದ ನಟಿಯರನ್ನೇ ಆಯ್ಕೆ ಮಾಡಿಕೊಳ್ಳಬೇಕೆಂದು ನಿರ್ಧಾರ ಮಾಡಿದ್ದೆವು . ಅದಕ್ಕೆ ಆಡಿಷನ್ ಕೂಡ ನಡೆಸಿದವು.. ಯಾರು ಕೂಡ ಈ ಪಾತ್ರದಲ್ಲಿ ಅಭಿನಯಿಸಲು ಒಪ್ಪಲಿಲ್ಲ. ಹಾಗೆಯೇ ಕನ್ನಡದ ಬಹಳಷ್ಟು ನಟಿಯರನ್ನು ಭೇಟಿ ಮಾಡಿ ಬಂದೆವು. ಅವರು ಕೂಡ ಒಪ್ಪಿಕೊಳ್ಳಲಿಲ್ಲ. ಕೊನೆಗೆ ಮುಂಬೈ ಮೂಲದ ಆಕರ್ಷಕ ಹಾಗೂ ನಸ್ರೀನ್ ಒಪ್ಪಿಕೊಂಡು ಬಂದರು. ಹೊಸಬರೆಂದರೆ ಕನ್ನಡದ ನಟಿಯರು ಲಿಪ್‌ಲಾಕ್ ಮಾಡಲು ಒಪ್ಪಿಕೊಳ್ಳುವುದಿಲ್ಲ’ ಅಂತ ರಾಜ್ ಸೂರ್ಯನ್ ತಮ್ಮೊಳಗಿನ ಬೇಸರದ ಮಾತುಗಳನ್ನು ಕೊಂಚ ಜೋರು ಧ್ವನಿಯಲ್ಲೇ ಹೇಳಿಕೊಂಡರು. ಕನ್ನಡದ ನಟಿಯರನ್ನು ಈ ರೀತಿ ದೂರುವುದು ಎಷ್ಟು ಸರಿ ಅಂದಾಗ ಅವರ ಬಾಯಲ್ಲಿ ಮೊದಲ ಬಂದ ಹೆಸರು ನಟಿ ಸಂಯುಕ್ತ ಹೆಗಡೆ ಅವರದ್ದು.. ಸಂಯುಕ್ತ ಹೆಗಡೆ ಹೊಸಬರ ಜೊತೆ ಲಿಪ್ ಲಾಕ್ ಮಾಡುವುದಿಲ್ಲ ಎಂದು ಬಿಟ್ಟರಂತೆ…
Comments