ನಟಿಯಿಂದಲೇ ನಟಿಗೆ ಪ್ರಪೋಸ್..!! ನಿನ್ನನ್ನು ಮದುವೆಯಾಗುತ್ತೇನೆ ಒಪ್ಪಿಗೆ ಇದ್ಯಾ ಎಂದ ಸ್ಟಾರ್ ನಟಿ.!!!
ಇತ್ತಿಚಿಗೆ ಸಲಿಂಗಕಾಮಿಗಳ ಮದುವೆ ಹೆಚ್ಚಾಗಿಯೇ ನಡೆಯಿತ್ತಿದೆ.. ಮೊದಲು ಹುಡುಗ ಹುಡುಗಿ ಮದುವೆಯಾಗುತ್ತಿದ್ದರು.. ಆದರೆ ಕಾಲ ಬದಲಾದಂತೆ ಮದುವೆಯ ವಿಷಯದಲ್ಲೂ ಕೂಡ ಬದಲಾವಣೆ ಬಂದಿದೆ… ಗಂಡು ಹೆಣ್ಣು ಮದುವೆಯಾಗುತ್ತಿದ್ದರು ಆದರೆ ಇದೀಗ ಹುಡುಗ ಹುಡುಗನನ್ನೆ ಮದುವೆಯಾಗುವುದು, ಹುಡುಗಿ ಹುಡುಗಿಯನ್ನೆ ಮದುವೆಯಾಗುವುದು ಸಾಮಾನ್ಯವಾಗಿ ಬಿಟ್ಟಿದೆ.. ಇದೀಗ ಈ ವಿಷಯದಲ್ಲಿ ನಟಿಯರಿಬ್ಬರ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ.. ತಮಿಳು, ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿ ಎಲ್ಲರ ಮನಗೆದ್ದಿರುವ ತ್ರಿಷಾ ಕೃಷ್ಣನ್ ಮಾಡಿರುವ ಒಂದು ಟ್ವೀಟ್ ಹೆಚ್ಚು ಸುದ್ದಿಯಾಗುತ್ತಿದೆ..
ತ್ರಿಶಾ ಮಾಡಿರುವ ಈ ಟ್ವೀಟ್ ತಮಾಷೆಗಾಗಿಯೋ ಅಥವಾ ಗಂಭೀರವಾಗಿಯೋ ಗೊತ್ತಿಲ್ಲ. ಆದರೆ ನಟಿ ಚಾರ್ಮಿಯೊಂದಿಗೆ ಅವರು ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಒಂದು ರೀತಿಯ ಕೋಲಾಹಲವೆಬ್ಬಿಸಿದೆ ಎನ್ನಬಹುದು. ಚಾರ್ಮಿ ಕೌರ್ , ತ್ರಿಷಾ ಕೃಷ್ಣನ್ ಜೊತೆಗೆ ತಬ್ಬಿಕೊಂಡು ಮುತ್ತಿಕ್ಕುತ್ತಿರುವ ಫೋಟೋ ಪ್ರಕಟಿಸಿ 'ಐ ಲವ್ ಯೂ ಬೇಬಿ. ನನ್ನ ಪ್ರಪೋಸಲ್ ಗೆ ನಿನ್ನ ಒಪ್ಪಿಗೆಗಾಗಿ ಮಂಡಿಯೂರಿ ಕಾಯುತ್ತಿದ್ದೇನೆ. ನಿನಗೆ ಗೊತ್ತು ಈಗ ಇದು ಕಾನೂನು ಪ್ರಕಾರವೂ ನಿಷಿದ್ಧವೇನಲ್ಲ. ನಾವು ಮದುವೆಯಾಗೋಣ' ಎಂದು ಚಾರ್ಮಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. 'ಥ್ಯಾಂಕ್ಯೂ ಮತ್ತು ನಿನಗೆ ನಾನು ಈಗಾಗಲೇ ಒಪ್ಪಿಗೆ ನೀಡಿದ್ದೇನೆ' ಎಂದು ತ್ರಿಷಾ ಪ್ರತಿಕ್ರಿಯಿಸಿದ್ದಾರೆ. ತ್ರಿಷಾ ಈ ರೀತಿ ಉತ್ತರಿಸುತ್ತಿದ್ದಂತೇ ನಿಜವಾಗಿಯೂ ಈ ಸುದ್ದಿ ನಿಜವೇ ಅಥವಾ ಈ ಇಬ್ಬರು ಸುಮ್ಮನೇ ಗಾಸಿಪ್ ಹುಟ್ಟುಹಾಕಿದ್ದಾರಾ ಎಂದು ತಿಳಿದುಬಂದಿಲ್ಲ. ಒಂದು ವೇಳೆ ಇದು ನಿಜವಾದರೆ ನಟಿಯಿಬ್ಬರು ಮದುವೆಯಾಗಲು ಸಿದ್ದರಾಗಿದ್ದಾರೆ ಎನ್ನಬಹುದು.. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವ ರೀತಿ ಪ್ರತಿಕ್ರಿಯಿಸಿತ್ತಾರೋ ಗೊತ್ತಿಲ್ಲ..
Comments