ಮಾಜಿ ವಿಶ್ವಸುಂದರಿಯ ಶವ ಹೋಟೆಲ್’ನಲ್ಲಿ ಪತ್ತೆ..!! ಕೊಲೆಯೋ..ಆತ್ಮಹತ್ಯೆಯೋ..!!!

ಫ್ಯಾಟಿಮಿಹ್ ಡವಿಲ್ಲಾ ಸೋಸಾ(31) ಅನುಮಾಸ್ಪದವಾಗಿ ಮೃತಪಟ್ಟ ಮಾಜಿ ಸುಂದರಿಯಾಗಿದ್ದಾರೆ.. ಇನ್ನೂ ಗುರುವಾರ ಬೆಳಗಿನ ಜಾವ ಹೋಟೆಲ್‍ನ ಬಾತ್‍ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಫ್ಯಾಟಮಿಹ್ ಶವ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಹೊಟೆಲ್ ಸಿಬ್ಬಂದಿಗಳು ಶವವನ್ನು ನೋಡಿದ ನಂತರ ಪೊಲೀಸರಿಗೆ ಮಾಹಿತಿಯನ್ನು ತಿಳಿಸಿದ್ದಾರೆ..
ಫ್ಯಾಟಿಮಿಹ್ ರೂಪದರ್ಶಕಿ ಆಗಿದ್ದು, ಕೆಲಸದ ಸಂದರ್ಶನಕ್ಕಾಗಿ ಏಪ್ರಿಲ್ 23ರಂದು ಮೆಕ್ಸಿಕೋಗೆ ಬಂದಿದ್ದರು. ಮೆಕ್ಸಿಕೋಗೆ ಆಗಮಿಸಿದ ಬಳಿಕ ಫ್ಯಾಟಿಮಿಹ್ ಹೋಟೆಲ್‍ವೊಂದರಲ್ಲಿ ಉಳಿದುಕೊಂಡಿದ್ದಳು. ಆದರೆ ಇದ್ದಕ್ಕಿದ್ದ ಆಗೆ ಗುರುವಾರ ಬೆಳಗ್ಗೆ ರೂಪದರ್ಶಿ ಶವ ನೇಣು ಬಿಗಿದ ಪರಿಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಆದರೆ ಆಕೆಯ ಸಾವಿಗೆ ನಿಖಿರವಾದ ಕಾರಣ ತಿಳಿದುಬಂದಿಲ್ಲ… ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಬಗ್ಗೆ ಈಗಾಗಲೇ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ.
Comments