ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ದರ್ಶನ್’ಗೆ ನಾಯಕಿ..!!

ಸ್ಯಾಂಡಲ್’ವುಡ್’ಗೆ ಪರಭಾಷೆಗಳ ನಟ ನಟಿಯರ ಎಂಟ್ರಿ ಜೋರಾಗಿ ಇದೆ… ಇದೀಗ ಬಾಲಿವುಡ್ ನಾಯಕಿಯೊಬ್ಬಳು ಗಾಂಧಿನಗರಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಜೋರಾಗಿಯೇ ಕೇಳಿಬರುತ್ತಿವೆ… ದರ್ಶನ್ ಸಿನಿಮಾ ಅಂದ್ರೆ ಕೇಳಬೇಕಾ… ಬಾಕ್ಸ್ ಆಫೀಸ್ ಸುಲ್ತಾನ್ ಅಂತಾನೇ ಫೇಮಸ್ ಆಗಿ ಬಿಟ್ಟಿದ್ದಾರೆ.ಇದೀಗ ದಚ್ಚುವಿನ ಮುಂದಿನ ಸಿನಿಮಾ ರಾಬರ್ಟ್ ಸಿನಿಮಾ ಹೆಸರಿನಿಂದಾನೇ ಸಾಕಷ್ಟು ಸುದ್ದಿ ಮಾಡುತ್ತಿದೆ.. ಇದೀಗ ಈ ಸಿನಿಮಾಗೆ ನಾಯಕಿ ಯಾರು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಕೂಡ ಮೂಡಿದೆ.
ಮೂಲಗಳ ಪ್ರಕಾರ ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ರಾಬರ್ಟ್ ಗೆ ನಾಯಕಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.. ಐಶ್ವರ್ಯ ರೈ.. ಹೇಳಿ ಕೇಳಿ ಮೂಲತಃ ಮಂಗಳೂರಿನ ಬೆಡಗಿ. ವಿಶ್ವ ಸುಂದರಿ ಆಗಿ, ನಟಿಯಾಗಿ ಐಶ್ವರ್ಯ ಎಲ್ಲೆಡೆ ಸಿಕ್ಕಾಪಟ್ಟೆ ಪೇಮಸ್ ಆಗಿದ್ದಾರೆ... ಇಷ್ಟು ವರ್ಷ ಆದರೂ ಕೂಡ ಕನ್ನಡದ ಸಿನಿಮಾದಲ್ಲಿ ನಟಿಸೋಕೆ ಆಗಿರಲಿಲ್ಲ. ಐಶ್ವರ್ಯ ಸ್ವತಃ ಕನ್ನಡದಲ್ಲಿ ಅಭಿನಯಿಸುವ ಆಸೆ ಇದೆ ಎಂದು ಹೇಳಿದ್ದರು... ಇದೀಗ ‘ರಾಬರ್ಟ್ ಅಂಡ್ ಟೀಂ’ ಇಂಥದ್ದೊಂದು ಕೆಲಸಕ್ಕೆ ಮುಂದಾಗಿದೆ. ಐಶ್ವರ್ಯ ರೈ ಅನ್ನು ಭೇಟಿಯಾಗಿ ಚಿತ್ರಕಥೆಯನ್ನು ವಿಶ್ವ ಸುಂದರಿಗೆ ಹೇಳಲಿದ್ದಾರೆ..ಒಂದು ವೇಳೆ ಐಶ್ವರ್ಯ ಒಪ್ಪಿಕೊಂಡರೇ ಬಾಲಿವುಡ್ ಬೆಡಗಿ ಸ್ಯಾಂಡಲ್ ವುಡ್ ನಲ್ಲಿ ದಚ್ಚುಗೆ ಜೋಡಿಯಾಗಲಿದ್ದಾರೆ.
Comments