ಇನ್ಮುಂದೆ ರಾಧ ಮಿಸ್ ಆಗಿಲಿದ್ದಾರೆ ಕಿರುತೆರೆಯ ರಾಧಿಕ ಪಂಡಿತ್..!!

04 May 2019 11:39 AM | Entertainment
2000 Report

ಕನ್ನಡ ಕಿರುತೆರೆ ಜನಪ್ರಿಯ ಧಾರವಾಹಿ ರಾಧಾ ರಮಣ ಧಾರವಾಹಿ ಎಲ್ಲರ ಮೆಚ್ಚುಗೆ ಗಳಿಸಿತ್ತು. ಸೀರಿಯಲ್ ನಲ್ಲಿ  ರಾಧಾ ಪಾತ್ರ ಮಾಡುತ್ತಿದ್ದ ರಾಧಾ ಮಿಸ್ ಅಲಿಯಾಸ್ ಶ್ವೇತಾ ಆರ್. ಪ್ರಸಾದ್ ಧಾರವಾಹಿಯಿಂದ ಹೊರ ಬಂದಿದ್ದಾರೆ. ಇನ್ನು ಮುಂದೆ ಧಾರವಾಹಿಯಲ್ಲಿ ರಾಧಾ ಮಿಸ್ ಇರೋದಿಲ್ಲ.ಈ ಸುದ್ದಿ ಕೇಳುತ್ತಿದ್ದಂತೇ ರಾಧಾ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಂದಹಾಗೇ ಅವರು ಧಾರವಾಹಿಯಿಂದ ಹೊರ ನಡೆದಿರುವುದು ಸದ್ಯಕ್ಕೆ ಖಚಿತವಾಗಿದೆ.ಇನ್ನು ರಾಧಾ ಅವರ ಜಾಗಕ್ಕೆ ಹೊಸ ನಾಯಕಿ ಆಗಮನ ಆಗಲಿದ್ದಾರೆ.

ಆ ನಂತರ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಅವರ ಒತ್ತಾಯಕ್ಕೆ ಮಣಿದು ರಾಧ ರಮಣ ಧಾರವಾಹಿಯಲ್ಲಿ ನಟಿಸೋಕೆ ಒಪ್ಪಿದ್ದರಂತೆ. ಅದು ಒಪ್ಪಂದದ ಮೇರೆಗೆ. ಕೇವಲ ಒಂದು ವರ್ಷದ ಮಟ್ಟಿಗೆ ಧಾರವಾಹಿಯಲ್ಲಿ ನಟಿಸೋಕೆ ನಾನ್ ಸಿದ್ಧರಾಗಿದ್ದೇನೆ ಎಂದು ಒಪ್ಪಂದ ಮಾಡಿಕೊಂಡಿದ್ದರಂತೆ. ಆದರೆ ಜನರ ಪ್ರತಿಕ್ರಿಯೆ ನೋಡಿ ಇಷ್ಟು ಸಮಯದವರೆಗೆ ಒಪ್ಪಂದ ಮುಂದುವರಿಸಿದ್ದರು. ಆದರೆ ಇದೀಗ ತಮಗೆ ಧಾರವಾಹಿಗಳಿಂದ ಬ್ರೇಕ್ ತೆಗೆದುಕೊಳ್ಳಬೇಕು ಎನಿಸಿದೆ. ಅದಕ್ಕೆ ಧಾರವಾಹಿಯಿಂದ ಹೊರಬಂದೆ ಎಂದು ರಾಧಾ ಮಿಸ್ ಅಲಿಯಾಸ್ ಶ್ವೇತಾ ಹೇಳಿದ್ದಾರೆ. ಇದೀಗ ಅವರ ಜಾಗಕ್ಕೆ ಪ್ಯಾಟೆ ಮಂದಿ ಕಾಡಿಗೆ ಬಂದ್ರು ’ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಕಾವ್ಯ ಇದಾದ ಮೇಲೆ ಕಾಣಿಸಿಕೊಂಡಿದ್ದು ‘ಶುಭ ವಿವಾಹ’, ‘ಮೀರಾ ಮಾಧವ’ ಹಾಗೂ ‘ಗಾಂಧಾರಿ’ ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕಿರುತೆರೆಯ ರಾಧಿಕ ಪಂಡಿತ್ ಅಂತಾ ಫೇಮಸ್ ಆಗಿರುವ ಕಾವ್ಯಾಗೌಡ ಎಂಟ್ರಿ ಕೊಡುತ್ತಿದ್ದಾರೆ. ಶ್ವೇತಾಗೆ ಹೇಗೆ ಎಲ್ಲರೂ ಸಪೋರ್ಟ್ ಮಾಡುತ್ತಿದ್ದರೋ ಅದರಂತೆ ಕಾವ್ಯಾ ಅವರಿಗೆ ಸಪೋರ್ಟ್ ಮಾಡಿ ಎಂದು ಧಾರವಾಹಿಯ ನಿರ್ದೇಶಕರ ಮಾತಾಗಿದೆ.

Edited By

Manjula M

Reported By

Manjula M

Comments