ಅಭಿಮಾನಿ ಮೇಲೆ ಗರಂ ಆದ ಚಾಲೆಂಜಿಂಗ್ ಸ್ಟಾರ್ ದರ್ಶನ್..!!

ನೆನ್ನೆಯಷ್ಟೆ ಮಾತಿನಲ್ಲಿ ಚಾತುರ್ಯ ಎನಿಸಿಕೊಂಡಿದ್ದ ಮಾಸ್ಟರ್ ಹೀರಣ್ಣಯ್ಯ ಅವರು ಬಾರದ ಲೋಕಕ್ಕೆ ಪಯಣ ಬೆಳಸಿದ್ದಾರೆ.. ಸಿನಿಮಾ ಕ್ಷೇತ್ರದಲ್ಲಿಯೂ ಕೂಡ ಸಾಧನೆ ಮಾಡಿದ್ದಾರೆ. ನೆನ್ನೆ ಮಾಸ್ಟರ್ ಹೀರಣ್ಣಯ್ಯ ನವರ ಅಂತಿಮ ದರ್ಶನಕ್ಕೆ ಸಾಕಷ್ಟು ಗಣ್ಯರು ಸೇರಿದಂತೆ ಕಲಾವಿಧರು, ಅಭಿಮಾನಿಗಳು ಬಂದಿದ್ದರು.. ಅದೇ ರೀತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅವರ ಅಂತಿಮ ದರ್ಶನ ಪಡೆಯಲು ಬಂದಿದ್ದರು. ಈ ವೇಳೆ ಅಭಿಮಾನಿಯ ಮೇಲೆ ದರ್ಶನ್ ಗರಂ ಆಗಿದ್ದಾರೆ.
ಗಜ' ಚಿತ್ರದಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರೊಂದಿಗೆ ಅಭಿನಯಿಸಿದ ನೆನಪುಗಳು ಸದಾ ನನ್ನೊಂದಿಗೆ ಇರುತ್ತವೆ ಎಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.ಕನ್ನಡ ರಂಗಭೂಮಿಯ ಹಿರಿಯ ಕಲಾವಿದರಾದ ಮಾಸ್ಟರ್ ಹಿರಣಯ್ಯ ಅವರು ವಿಧಿವಶರಾಗಿದ್ದಾರೆ. ದುಃಖ ತಡೆದುಕೊಳ್ಳುವ ಶಕ್ತಿಯನ್ನು ಕುಟುಂಬ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅಂತಿಮ ದರ್ಶನ ಪಡೆದು ದರ್ಶನ್ ವಾಪಸ್ ತೆರಳುವ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಡಿ ಬಾಸ್ ಎಂದು ಘೋಷಣೆ ಕೂಗಲು ಮುಂದಾಗಿದ್ದಾರೆ.. ಇದರಿಂದ ಕೋಪಗೊಂಡ ದರ್ಶನ್ ಸುಮ್ಮನಿರುವಂತೆ ತಿಳಿಸಿದ್ದಾರೆ. ಅಭಿಮಾನಿ ಮೇಲೆ ಗರಂ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಅಂತಿಮ ದರ್ಶನಕ್ಕೆ ಬಂದಾಗ ಶಾಂತಿಯಿಂದ ಇರಬೇಕು ಎಂದು ಬುದ್ದಿವಾದ ಕೂಡ ಹೇಳಿದ್ದಾರೆ.
Comments