ರಚಿತಾ ನೀವು ಡವ್ ರಾಣಿ,ಡುಮ್ಮಿ ಎಂದು ಡೈರೆಕ್ಟ್ ಆಗಿ ಹೇಳಿದವರಿಗೆ ಡಿಂಪಲ್ ಕ್ವೀನ್ ಏನ್ ಹೇಳುದ್ರು ಗೊತ್ತಾ..?
ಬುಲ್ ಬುಲ್ ಬೆಡಗಿ ರಚಿತರಾಮ್ ಡಿಂಪಲ್ ಗೆ ಫಿದಾ ಆಗದೇ ಇರುವವರೇ ಇಲ್ಲ ಅನಿಸುತ್ತದೆ… ಸ್ಯಾಂಡಲ್ವುಡ್ ನಲ್ಲಿ ಕಿರುತೆರೆಯಿಂದ ಬೆಳ್ಳಿ ಪರದೆಗೆ ಬಂದು ಕಡಿಮೆ ಅವಧಿಯಲ್ಲಿ ಹೆಸರು ಮಾಡಿದ ನಟಿ ಎಂದರೆ ಅವರೇ ಡಿಂಪಲ್ ಕ್ವೀನ್ ರಚಿತಾ ರಾಮ್.. ಈಕೆ ಮೊದಲ ಹೆಸರು ಬಿಂದಿಯಾ ರಾಮ್…. ಬುಲ್ ಬುಲ್ ಸಿನಿಮಾದ ಕಾವೇರಿಯಿಂದ ಹಿಡಿದು ಮಾಡಿರುವ ಎಲ್ಲಾ ಪಾತ್ರಗಳು ಕೂಡ ಅವರಿಗೆ ಯಶಸ್ಸನ್ನು ತಂದುಕೊಟ್ಟಿವೆ…
ಆದರೆ ರಚಿತಾ ಮೊದಲ ಸಿನಿಮಾಗೂ ಹಾಗೂ ಈಗಿರುವುದಕ್ಕೂ ದಪ್ಪ ಆಗಿದ್ದಾರೆ ಅನ್ನೋದು ಅಭಿಮಾನಿಗಳ ಮಾತು… ಇತ್ತಿಚಿಗೆ ನಿರೂಪಕಿ ಅನುಶ್ರೀ ಜೊತೆ ಮಾತಿಗಿಳಿದ ರಚಿತಾ ಈ ಬಗ್ಗೆ ಖಡಕ್ ಆಗಿಯೇ ಮಾತನಾಡಿದ್ದಾರೆ..ನೆಟ್ಟಿಗರು ರಚಿತ ರಾಮ್ ಗೆ ಪ್ರಶ್ನೆ ಕೇಳಿದ್ದರು.. ಅದನ್ನು ಅನುಶ್ರೀ ನೇರವಾಗಿ ಬುಲ್ ಬುಲ್ ಬೆಡಗಿಗೆ ಕೇಳಿದ್ದಾರೆ, ನೀವು ಡವ್ ರಾಣಿಯಂತೆ ಅಂತ… ಅದಕ್ಕೆ ಉತ್ತರ ನೀಡಿದ ರಚಿತಾ ನನ್ನನ್ನು ಇಷ್ಟ ಪಡದೇ ಇರುವವರು ನನ್ನನ್ನ ಡವ್ ರಾಣಿ ಅಂತಾರೇ ಅದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ..ಕೆಲವರು ನಾನು ಏನೇ ಮಾಡಿದರೂ ಡವ್ ಅಂತಾರೇ, ಅವರಿಗೆ ಮಾಡುವುದಕ್ಕೆ ಬೇರೆ ಕೆಲಸ ಇಲ್ಲ, ಓವರ್ ಆಕ್ಟಿಂಗ್ ಮಾಡ್ತಾಳೆ ಅಂತಾರೆ, ಇನ್ನೂ ಕೆಲವರು ಡುಮ್ಮಿ ಅಂತಾರೆ, ಅದಕ್ಕೆಲ್ಲಾ ತಾನು ತೆಲೆಕೆಡಿಸಿಕೊಳ್ಳುವುದಿಲ್ಲ ಎಂದು ಡೈರೆಕ್ಟ್ ಆಗಿಯೇ ಹೇಳಿದ್ದಾರೆ. ಜಾಸ್ತಿ ಮೇಕಪ್ ಮಾಡ್ಕೋತ್ತಾರೆ ಅಂತಾರೆ, ಮಾಡ್ಕೊಂಡಿಲ್ಲ ಅಂದ್ರೆ ಎಷ್ಟು ಕಪ್ಪಾಗಿ ಇದ್ದಾರೆ ಅಂತಾರೆ,.. ಆದರೆ ನಾನು ಇದ್ಯಾವುದಕ್ಕೂ ಕ್ಯಾರೆ ಎನ್ನುವುದಿಲ್ಲ ಎಂದು ತಿಳಿಸಿದ್ದಾರೆ.
Comments