ಸ್ಯಾಂಡಲ್’ವುಡ್ ನಲ್ಲಿ 2020ಕ್ಕೆ ಬರಲಿದೆ ಬರೋಬ್ಬರಿ 300 ಕೋಟಿಯ ಚಿತ್ರ..!! ಆ್ಯಕ್ಷನ್ ಕಟ್ ಹೇಳ್ತಿರೋದು ಯಾರ್ ಗೊತ್ತಾ..?
ಸ್ಯಾಂಡಲ್ ವುಡ್’ನಲ್ಲಿ ಹೈ ಬಜೆಟ್ ಸಿನಿಮಾಗಳು ಕಾಮನ್ ಆಗಿಬಿಟ್ಟಿವೆ… ಕೆಜಿಎಫ್ ಸಿನಿಮಾ ಸ್ಯಾಂಡಲ್’ವುಡ್ ನಲ್ಲಿ ದೊಡ್ಡ ದಾಖಲೆಯನ್ನೆ ಮಾಡಿತ್ತು.. ಹೈಬಜೆಟ್ ಚಿತ್ರ ಇಡೀ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿತ್ತು.. 2020 ಕ್ಕೆ ಕೆಜಿಎಫ್ ರೀತಿಯ ಮತ್ತೊಂದು ಮೆಗಾ ಸಿನಿಮಾ ತೆರೆಗೆ ತರಲು ಸಿದ್ದವಾಗಿದೆ ಸ್ಯಾಂಡಲ್ ವುಡ್...ಬಿಗ್ ಬಜೆಟ್ ಸಿನಿಮಾವನ್ನು ತೆರೆಗೆ ತರಲು ರೆಡಿಯಾಗಿದೆ. ಕನ್ನಡದಲ್ಲೇ ತೆರೆಕಾಣಲು ಸಜ್ಜಾಗಿರೋ ಈ ಸಿನಿಮಾದಲ್ಲಿ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್‌ಗಳು ನಟಿಸಲಿದ್ದಾರೆ.
ಈ ಸಿನಿಮಾ ನೈಜ ಘಟನೆಯ ಆಧಾರಿತ ಸಿನಿಮಾ ಇದಾಗಿದೆ… ಈ ಸಿನಿಮಾದ ಬಂಡವಾಳ ಎಷ್ಟು ಗೊತ್ತಾ..? ಬರೋಬ್ಬರಿ 300 ಕೋಟಿ…ಈ ಸಿನಿಮಾ ರಾಜೀವ್ ಗಾಂಧಿ ಹತ್ಯೆಯ ಮಾಸ್ಟರ್ ಮೈಂಡ್ ಕುರಿತ ಚಿತ್ರ ಇದಾಗಿದೆ.. ಈ ಚಿತ್ರದ ಹೆಸರು LTTE. ಚಿತ್ರಕ್ಕೆ ನಿರ್ದೇಶಕ ಎ.ಎಂ.ರಮೇಶ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದು, LTTE ಪ್ರಭಾಕರನ್ ಕುರಿತ ಸ್ಟೋರಿ ಇದಾಗಿದೆ ಎಂದು ಹೇಳಲಾಗಿದೆ. ಈ ಚಿತ್ರಕ್ಕಾಗಿ ಡೈರೆಕ್ಟರ್ ರಮೇಶ್ 25 ವರ್ಷಗಳ ಸಂಶೋಧನೆ ಮಾಡಿದ್ದಾರೆ. ರಾಣಾ ದಗ್ಗುಬಾಟಿ, ವೆಂಕಟೇಶ್, ಮಾಧವನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದ್ದು, LTTE ನಾಯಕರನ್ನೂ ಭೇಟಿ ಮಾಡಿ ವಿಷಯ ಸಂಗ್ರಹಿಸಲಾಗಿದೆ. 2020ಕ್ಕೆ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಸಾಧನೆ ಆಗಲಿದೆ ಅನ್ನೋದರಲ್ಲಿ ನೋಡೌಟ್..
Comments