ತನ್ನ ಮೇಲೆ ಆದಂತಹ ಲೈಂಗಿಕ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ನಟಿ..!

ಕೆಲವು ತಿಂಗಳುಗಳ ಹಿಂದೆ ಮೀಟೂ ಎಂಬ ಪದ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.. ಸಿನಿಮಾ ಕ್ಷೇತ್ರ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿಯೂ ಕೂಡ ಮೀಟೂ ಹೆಚ್ಚಾಗಿಯೇ ಕೇಳಿಬಂದಿತ್ತು.. ಮಹಿಳೆಯರು ತಮಗಾದ ಲೈಂಗಿಕ ಶೋಷಣೆಯ ಬಗ್ಗೆ ಧೈರ್ಯವಾಗಿ ಹೇಳಿಕೊಂಡರು.. ಆ ಸಮಯದಲ್ಲಿ ನಟಿ ಹಾಗೂ ಬರಹಗಾರ್ತಿ ಶೃತಿ ಚೌಧರಿ ಕೂಡ ಮೀಟೂ ಬಗ್ಗೆ ತುಟಿ ಬಿಚ್ಚಿದ್ದರು…
ಇದೀಗ ಶೃತಿ ಚೌಧರಿ ಹ್ಯೂಮನ್ಸ್ ಆಫ್ ಬಾಂಬೆ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದಾರೆ. ಆ ಸಮಯದಲ್ಲಿ ತನ್ನ ಬಾಯ್ ಫ್ರೆಂಡ್ ಕೈಗೆ ಸಿಕ್ಕು ಅನುಭವಿಸಿದ ಕರಾಳ ಕತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಜೊತೆಗೆ ಇತರ ಮಹಿಳೆಯರಿಗೂ ನನ್ನ ಕತೆ ಸ್ಪೂರ್ತಿಯಾಗಲಿದೆ ಎಂದು ಕೂಡ ತಿಳಿಸಿದ್ದಾರೆ. ಸ್ಕಾಟ್ಲೆಂಡ್ ಪ್ರವಾಸದಲ್ಲಿ ಆತ ನನ್ನ ಜೊತೆ ಅತ್ಯಂತ ಕಠೋರವಾಗಿ ನಡೆದುಕೊಂಡ. ಆತ ನನ್ನನ್ನು ಕಚ್ಚುತ್ತಿದ್ದ, ಇದರಿಂದ ನಾನು ತುಂಬಾ ನರಕಯಾತನೆ ಅನುಭವಿಸಿದೆ ಎಂದು ಹೇಳಿಕೊಂಡಿದ್ದರು...ತನ್ನ ಬಾಯ್ ಫ್ರೆಂಡ್ ಬಂಡವಾಳ ಗೊತ್ತಾದ ಮೇಲೆ ಶೃತಿ ಆತನೊಂದಿಗೆ ಸಂಬಂಧ ಮುರಿದುಕೊಂಡಳು. ನಂತರ ತಿಳಿಯಿತು.. ನಾನೊಬ್ಬಳು ಮಾತ್ರ ಲೈಂಗಿಕ ದೌರ್ಜನ್ಯ ಅನುಭವಿಸಿಲ್ಲ, ನನ್ನಂತ ಅನೇಕ ಮಹಿಳೆಯರು ಲೈಂಗಿಕ ಶೋಷಣೆಯನ್ನು ಅನುಭವಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
Comments