ಹೆಸರಾಂತ ಕನ್ನಡ ನಾಟಕಕಾರ ಮಾಸ್ಟರ್ ಹೀರಣ್ಣಯ್ಯ ಇನ್ನಿಲ್ಲ..
ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಹೆಸರಾಂತ ಕನ್ನಡ ನಾಟಕಕಾರ ಮತ್ತು ನಟ ಮಾಸ್ಟರ್ ಹೀರಣ್ಣಯ್ಯ ಇಂದು ಕೊನೆಯುಸಿರೆಳೆದಿದ್ದಾರೆ.. ತಮ್ಮ ಪರಿಣಾಮಕಾರಿಯಾದ ಭಾಷಣದಿಂದಲೇ ಸಾಕಷ್ಟು ಜನರ ಮನವನ್ನು ಗೆದ್ದಿದ್ದರು. ರಾಜಕೀಯ ಹಾಗೂ ಭ್ರಷ್ಟಾಚಾರಗಳನ್ನು ಯಾವಾಗಲೂ ಟೀಕಿಸುತ್ತಲೆ ಇದ್ದರು.. ಸಾಮಾಜಿಕವಾಗಿ ಒಳ್ಳೆಯ ಕೆಲಸಳನ್ನು ಮಾಡುತ್ತಿದ್ದರು. ಜನ ಮನ ಗೆದ್ದ ಮಾಸ್ಟರ್ ಹೀರಣ್ಣಯ್ಯ ಇಂದು ಕೊನೆಯುಸಿರೆಳೆದಿದ್ದಾರೆ
ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಹಿರಣ್ಣಯ್ಯನವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮಕ್ಮಲ್ ಟೋಪಿ, ಕಪಿಮುಷ್ಟಿ, ದೇವದಾಸಿ, ನಡುಬೀದಿ ನಾರಾಯಣ, ಲಂಚಾವತಾರ, ಪಶ್ಚಾತ್ತಾಪ, ಭ್ರಷ್ಟಾಚಾರ, ಚಪಲಾವತಾರ, ಡಬ್ಬಲ್ ತಾಳಿ, ಸನ್ಯಾಸಿ ಸಂಸಾರ, ಸದಾರಮೆ, ಎಚ್ಚಮ ನಾಯಕ ಮೊದಲಾದ ನಾಟಕಗಳ ಮೂಲಕ ಭ್ರಷ್ಟ ರಾಜಕಾರಣಿಗಳಿಗೆ ಚಾಟಿ ಬೀಸುತ್ತಿದ್ದ ಹಿರಣ್ಣಯ್ಯ ಮಾತು ಇಂದಿಗೂ ಅಚ್ಚಳಿಯದೆ ಉಳಿಯುತ್ತದೆ. ಅಗಲಿಕೆ ತುಂಬಲಾರದ ನಷ್ಟವನ್ನು ಕೊಟ್ಟಿದೆ. ಸಿನಿಮಾ ಕ್ಷೇತ್ರದಲ್ಲಿಯೂ ಕೂಡ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು.
Comments