ಈ ಸ್ಟಾರ್ ನಟಿ ಮಾಜಿ ಪ್ರೇಮಿ ಸದ್ಯ ಕಂಬಿಯ ಹಿಂದೆ..!!

ಬಾಲಿವುಡ್ ನಟ ನಟಿಯರು ಒಂದಲ್ಲ ಒಂದು ವಿಷಯಕ್ಕೆ ಸದಾ ಸುದ್ದಿಯಾಗುತ್ತಲೆ ಇರುತ್ತಾರೆ.. ಕೆಲವರು ಒಳ್ಳೆಯದನ್ನು ಮಾಡಿ ಸುದ್ದಿಯಾಗುತ್ತಾರೆ. ಮತ್ತೆ ಕೆಲವರು ಮಾಡಬಾರದನ್ನು ಮಾಡಿ ಸುದ್ದಿಯಾಗುತ್ತಾರೆ. ಮತ್ತೆ ಕೆಲವರು ಏನೋ ಮಾಡಲು ಹೋಗಿ ಮತ್ತೇನೋ ಮಾಡಿ ಸುದ್ದಿಯಾಗುತ್ತಾರೆ. ಅರೇ ಯಾಕಪ್ಪಾ ಏನ್ ಹೇಳ್ತಿದ್ದಾರೆ ಅನ್ಕೊಂಡ್ರ.. ನಟಿ ಪ್ರೀತಿ ಜಿಂಟಾ ನಿಮಗೆಲ್ಲಾ ಗೊತ್ತೆ ಇದೆ.. ಇದೀಗ ಆಕೆಯ ಮಾಜಿ ಗೆಳಯ ಸುದ್ದಿಯಾಗಿದ್ದಾನೆ.
ನಟಿ ಪ್ರೀತಿ ಜಿಂಟಾ ಮಾಜಿ ಗೆಳೆಯ ನೆಸ್ ವಾಡಿಯಾಗೆ ಡ್ರಗ್ಸ್ ಪ್ರಕರಣದಲ್ಲಿ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ವಾಡಿಯಾ ಗ್ರೂಪ್ ಆಫ್ ಕಂಪನಿಯ ಮಾಲಿಕರೂ ಆಗಿರುವ ನೆಸ್ ವಾಡಿಯಾ ಮಾದಕ ದ್ರವ್ಯ ಇಟ್ಟುಕೊಂಡಿದ್ದ ತಪ್ಪಿಗೆ ಜಪಾನ್ ನಲ್ಲಿ ಅವರನ್ನು ಬಂಧಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂಬ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ಇದನ್ನು ವಾಡಿಯಾ ಗ್ರೂಪ್ ಮೂಲಗಳು ತಳ್ಳಿ ಹಾಕಿದ್ದು, ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದಿದೆ. ಮೂಲಗಳ ಪ್ರಕಾರ ನೆಸ್ ವಾಡಿಯಾ ಬಳಿ 25 ಗ್ರಾಂ ಮಾದಕ ದ್ರವ್ಯ ಪತ್ತೆಯಾಗಿತ್ತು ಎನ್ನಲಾಗಿದೆ. ಒಟ್ಟಾರೆಯಾಗಿ ಮಾದಕ ದ್ರವ್ಯಗಳನ್ನು ಇಟ್ಟುಕೊಂಡಿದ್ದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸುವಂತಾಗಿದೆ.
Comments