ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ ವಾರದ ಅತಿಥಿ ಇವರೆ ನೋಡಿ.!!

ಜನ ಮೆಚ್ಚುಗೆಯನ್ನು ಗಳಿಸಿರುವ ಕಾರ್ಯಕ್ರಮಗಳಲ್ಲಿ ವೀಕೆಂಡ್ ವಿತ್ ರಮೇಶ್ ಕೂಡ ಒಂದು… ಈಗಾಗಲೇ ಸಾಕಷ್ಟು ಸಾಧಕರು ಬಂದು ಹೋಗಿದ್ದಾರೆ.. ಮೂರು ಸೀಜನ್ಗಳನ್ನು ಯಶಸ್ವಿಯಾಗಿ ಮುಗಿಸಿ ನಾಲ್ಕನೆ ಸೀಜನ್ ನಡೆಯುತ್ತಿದೆ. ಈಗಾಗಲೇ ವೀರೇಂದ್ರ ಹೆಗ್ಗಡೆ ಹಾಗೂ ರಾಘವೇಂದ್ರ ರಾಜ್ ಕುಮಾರ್ ಬಂದು ಹೋಗಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಎರಡು ವಾರ ಎರಡು ಅತಿಥಿಗಳೊಂದಿಗೆ ಮುಗಿದಿದ್ದು, ಇದೀಗ ಮೂರನೇ ಅತಿಥಿ ಹೆಸರು ಬಹಿರಂಗಗೊಂಡಿದೆ.
ಆದರೆ ಮೂರನೇ ಅತಿಥಿ ಹೆಸರು ನೋಡಿ ಪ್ರೇಕ್ಷಕರು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರೆ, ಇನ್ನು ಕೆಲವು ಪ್ರೇಕ್ಷಕರು ಖುಷಿಯಾಗಿದ್ದಾರೆ. ಈ ವಾರದ ಅತಿಥಿ ಯಾರ್ ಗೊತ್ತಾ..? ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ನಂ.1 ನಟಿಯಾಗಿ ಮೆರೆದಿದ್ದ ಪ್ರೇಮಾ ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿ. ಆದರೆ ಪ್ರೇಮಾ ಹೆಸರು ಕೇಳಿದೊಡನೆ ಕೆಲವರು ಹಳೆಯ ನಟಿಯನ್ನು ಗುರುತಿಸಿರುವುದಕ್ಕೆ ಖುಷಿ ಪಟ್ಟರೆ ಮತ್ತೆ ಕೆಲವರು ಸಿನಿಮಾದವರು ಬಿಟ್ಟು ಬೇರೆಯವರು ನಿಮಗೆ ಸಾಧಕರ ಹಾಗೆ ಕಾಣಿಸುತ್ತಿಲ್ಲವಾ ಎಂದು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ವಾರ ರಾಘವೇಂದ್ರ ರಾಜ್ ಕುಮಾರ್ ಎಪಿಸೋಡ್ ಬಗ್ಗೆಯೂ ಜನ ಹೀಗೇ ಆಕ್ಷೇಪ ವ್ಯಕ್ತಪಡಿಸಿದ್ದರು. ಅದೇನೇ ಇದ್ದರೂ ಈ ವಾರ ನಮ್ಮೂರ ಮಂದಾರ ಹೂವೇ ನಟಿಯ ಜೀವನ ಕತೆಯನ್ನು ಕೇಳಲು ಸಿದ್ದರಾಗಿರಿ. ನಟಿ ಪ್ರೇಮ ಒಂದು ಕಾಲದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು… ಇದೀಗ ಅವರ ಜೀವನಗಾಥೆಯನ್ನು ಕೇಳುವ ಸಮಯ ಬಂದಿದೆ ಎನ್ನಬಹುದು
Comments