ವೇದಿಕೆ ಮೇಲೆ ಭಾವಿ ಸೊಸೆ ಬಗ್ಗೆ ರಾಘಣ್ಣ ಹೇಳಿದ್ದೇ ಬೇರೆ…
ಕಳೆದ ಬಾನುವಾರವಷ್ಟೇ ನಟ ರಾಘವೇಂದ್ರ ರಾಜ್ ಕುಮಾರ್ ಅವರನ್ನು ವೀಕೆಂಡ್ ಟೆಂಟ್ ನಲ್ಲಿ ಕರೆಸಲಾಗಿತ್ತು. ಸಾಧಕರ ಚೇರ್'ನಲ್ಲಿ ಕುಳಿತ ರಾಘವೇಂದ್ರ ರಾಜ್ ಕುಮಾರ್ ಅವರು ಸಾವನ್ನೇ ಗೆದ್ದು ಬಂದಿದ್ದಾರೆ. ತೀರಾ ಅನಾರೋಗ್ಯದಿಂದ ಬಳಲುತ್ತಿದ್ದ ರಾಘಣ್ಣ ಸದ್ಯ ಚೇತರಿಸಿಕೊಳ್ತಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಗಜಪತಿ ಗರ್ವಭಂಗ, ಟುವ್ವಿ ಟುವ್ವಿ ಟುವ್ವಿ, ಅನುರಾಗ ಅರಳಿತು ಇನ್ನಿತರ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ಖ್ಯಾತಿ ಅವರದ್ದು. ಅವರು ಕೆಲ ವರ್ಷಗಳ ನಂತರ ಚಿತ್ರರಂಗದಿಂದಲೇ ದೂರವಾಗಿಬಿಟ್ಟಿದ್ದರು. ಅದಕ್ಕೆ ಕಾರಣ ಅವರಿಗೆ ಪಾರ್ಶ್ವ ವಾಯು ಉಂಟಾಗಿತ್ತು. ಬಹಳ ಕಷ್ಟದ ದಿನಗಳನ್ನು ದಾಟಿ ಬಂದಿರುವ ಅವರ ಜೀವನ ಚಿತ್ರವನ್ನು ವೀಕೆಂಡ್ ಟೆಂಟ್ ನಲ್ಲಿ ತೋರಿಸಲಾಗಿತ್ತು.
ವೀಕೆಂಡ್ ವಿತ್ ಕಾರ್ಯಕ್ರಮದಲ್ಲಿ ಅವರು ಭಾವಿ ಸೊಸೆ ಬಗ್ಗೆ ಏನ್ ಮಾತನಾಡಿದ್ದಾರೆ ಗೊತ್ತಾ..? ಸಾಧಕರ ಚೇರ್ ನಲ್ಲಿ ಕುಳಿತಿದ್ದ ರಾಘವೇಂದ್ರ ರಾಜ್ ಕುಮಾರ್ ಅವರನ್ನು ನೋಡಲು ಬಂದ ಭಾವಿ ಸೊಸೆ, ಅಂದ್ರೆ ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಮಗನ ಹೆಂಡ್ತಿ ಮೈಸೂರಿನ ಹುಡುಗಿ ಕೈಯಲ್ಲಿ ತಟ್ಟೆ ಹಿಡಿದು ವೀಕೆಂಡ್ ಟೆಂಟ್ ಗೆ ಬಂದೇ ಬಿಟ್ಳು. ಈಕೆ ಬಗ್ಗೆ ರಾಘವೇಂದ್ರ ರಾಜ್ ಕುಮಾರ್ ಈಕೆ ನನ್ನ ಐದನೇ ತಾಯಿ. ಹೆಣ್ಣು ಮಗಳಾಗಿದ್ದರೇ ಮನೆಯಿಂದ ಹೊರ ಹೋಗಬೇಕಾಗುತ್ತಿತ್ತು. ಆದರೆ ಈಕೆ ಸೊಸೆಯಾಗಿ ಬಂದಿದ್ದಾರೆ. ಮಗಳಿಗಿಂತಲೂ ಹೆಚ್ಚು ಪ್ರೀತಿಸುತ್ತಾರೆ. ಆರೈಕೆ ಮಾಡುತ್ತಾರೆ ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ಭಾವಿ ಸೊಸೆ ಮಾತನಾಡಿ ಅಪ್ಪಾಜಿ ಊಟ ಮಾಡುವುದಿಲ್ಲವೆಂದು ಸುಮ್ಮನೇ ಕುಳಿತಾಗ ನನ್ನ ಕೈಯಿಂದಲೇ ಊಟ ಕಳುಹಿಸುತ್ತಾರೆ. ನಾನು ಕೊಟ್ಟರೇ ಅವರು ಊಟ ಮಾಡುತ್ತಾರೆಂದು ಮನೆಯವರು ನನ್ನ ಬಳಿಯೇ ಊಟ ಕೊಟ್ಟು ಕಳುಹಿಸುತ್ತಾರೆ ಎಂದರು. ಒಟ್ಟಾರೆ ರಾಜ್ ಫ್ಯಾಮಿಲಿಯಲ್ಲಿ ಹೆಣ್ಣು ಮಕ್ಕಳಿಗೆ ಬಹಳವಾಗಿ ಗೌರವ ಕೊಡುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ.
Comments