ರೇಪ್ ಸೀನ್ ಇದ್ಯಾ ಅಂದವನಿಗೆ ಸ್ಟಾರ್ ನಟಿಯಿಂದ ಮಂಗಳಾರತಿ..!!! ಅಷ್ಟಕ್ಕೂ ಆ ಸ್ಟಾರ್ ನಟಿ ಯಾರ್ ಗೊತ್ತಾ..?

ಸ್ಯಾಂಡಲ್ ‘ವುಡ್ ನಲ್ಲಿ ಸಿನಿಮಾವೊಂದರ ಟೈಟಲ್'ವೊಂದು ಶುರುವಿನಲ್ಲೇ ಭಾರೀ ಸುದ್ದಿ ಆಯ್ತು. ಇದೀಗ ಸಿನಿಮಾದ ಫಸ್ಟ್ ಲುಕ್ ಗೆ ಅಭಿಮಾನಿಗಳು ರೆಸ್ಪಾನ್ಸ್ ಮಾಡಿದ್ದಾರೆ. ಅಂದಹಾಗೇ ಸಿನಿಮಾದ ನಾಯಕಿಯಾಗಿ ನಟಿ ಅಧಿತಿ ಪ್ರಭುದೇವ್ ಅವರು ನಟಿಸುತ್ತಿರುವ ಸಿನಿಮಾ ರಂಗನಾಯಕಿ ಅಭಿಮಾನಿಗಳ ಮನದಲ್ಲಿ ಭಾರಿಯೇ ಕ್ರೇಜ್ ಹುಟ್ಟಿಸಿದೆ.
ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಅಂದಹಾಗೇ ಕರಾಳ ರಾತ್ರಿ ಸಿನಿಮಾ ನಿರ್ದೇಶನ ಮಾಡಿದ ನಿರ್ದೇಶಕ ದಯಾಳ್ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದು ಇದೀಗ ಮೊದಲ ಪೋಸ್ಟರ್ ಎಲ್ಲರನ್ನು ಸೆಳೆದಿದೆ.
ಏಫ್ರಿಲ್ 26 ರಂದು ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆದಿದೆ.. ಒಂದು ಹೆಣ್ಣಿನ ಮೇಲಾಗುವ ಅತ್ಯಾಚಾರ, ಅದರ ನಂತ್ರ ಆಕೆಯಲ್ಲಾಗೋ ಬದಲಾವಣೆ, ಸಿಟ್ಟು ತಲ್ಲಣಗಳ ಬಗ್ಗೆ ಮಾತನಾಡುವಂತಿದೆ ಟೀಸರ್. ಇಡೀ ಚಿತ್ರ ಇಂಥಾ ಗಂಭೀರವಾದ ವಿಷ್ಯದ ಬಗ್ಗೆ ಮಾತನಾಡಲು ಸಿದ್ದವಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. ಇನ್ನೂ ಚಿತ್ರದ ನಾಯಕಿ ಟೀಸರ್ ಬಗ್ಗೆ ಮಾತನಾಡುತ್ತಾ… ಈ ಟೀಸರ್ ನೋಡಿ ನನಗೊಬ್ರು ಸೋಷಿಯಲ್ ಮೀಡಿಯಾದಲ್ಲಿ ಒಬ್ಬರು ‘ಮೇಡಂ ರೇಪ್ ಸೀನ್ ಇದ್ಯಾ?’ ಅಂತಾ.. ಪ್ರಶ್ನೆ ಕೇಳಿದರು . ಒಂದು ಕ್ಷಣ ನನಗೆ ಶಾಕ್ ಆಗೋಯ್ತು. ಇಂಥವರೂ ಕೂಡ ಇರ್ತಾರಾ ಅಂತಾ ಒಮ್ಮೆಲೆ ಸಿಟ್ಟು ಕೂಡ ಬಂತು. ಇದೇನಪ್ಪ ಹೀಗೂ ಕೇಳ್ತಾರ ಎಂದು ತಕ್ಷಣ ಆತನನ್ನು ಬ್ಲಾಕ್ ಮಾಡಿದೆ. ಅವನಿಗೇನು ಉತ್ತರ ಕೊಡೋ ಗೋಜಿಗೆ ನಾನು ಹೋಗಲಿಲ್ಲ ಎಂದರು.
Comments