ವೀಡಿಯೋ ಮೂಲಕ ರಮ್ಯಾ ವಿರುದ್ಧ ಆಕ್ರೋಶ ಹೊರ ಹಾಕಿದ ಬುಲೆಟ್ ಪ್ರಕಾಶ್…!!!
ಹಾಸ್ಯ ನಟ ಬುಲೆಟ್ ಪ್ರಕಾಶ್ ಸ್ಯಾಂಡಲ್ ವುಡ್ ಪಸ್ಮಾವತಿಗೆ ಬೆವರಿಳಿಸಿದ ಬಗ್ಗೆ ನಿನ್ನೆ ಮಾಧ್ಯಮಗಳು ವರದಿ ಮಾಡಿದ್ದವು. ಇಡೀ ವಿಶ್ವವೇ ನರೇಂದ್ರ ಮೋದಿಯವರಿಗೆ ಸೆಲ್ಯೂಟ್ ಹೊಡೆಯುತ್ತಿದ್ದರೇ ರಮ್ಯಾ ಮಾತ್ರ ಮೋದಿಯವರನ್ನು ಹಿಯಾಳಿಸಿ ಮಾತನಾಡುವುದು ಎಷ್ಟು ಸರಿ. ಹಿಟ್ಲರ್ ಗೆ ಹೋಲಿಸಿ ಮೋದಿಯ ಬಗ್ಗೆ ವ್ಯಂಗ್ಯವಾಡಿದ ರಮ್ಯಾಗೆ ಹಾಸ್ಯ ನಟ ಬುಲೆಟ್ ಪ್ರಕಾಶ್ ಸಖತ್ತಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮ್ಮ ತಂದೆ ನೀವು ಚಿಕ್ಕವರಿದ್ದಾಗ ಸರಿಯಾಗಿ ಕಿವಿ ಹಿಂಡಿ ಬುದ್ಧಿ ಕಲಿಸಿದ್ದರೇ ನೀವು ಹೀಗೆ ಆಗುತ್ತಿರಲಿಲ್ಲವೆಂದಿದ್ದಾರೆ. ಅಷ್ಟೇ ಅಲ್ಲಾ ನಿಮಗೆ ವಿಡಿಯೋ ಮೂಲಕ ಸರಿಯಾಗಿ ಹೇಳ್ತೀನಿ ಎಂದು ಟ್ವೀಟ್ ಮಾಡಿದ್ದಾರೆ.
ಇದೀಗ ಮೋದಿಯ ಬಗ್ಗೆ ಹಿಯಾಳಿಸಿ ಮಾತನಾಡಿದ ರಮ್ಯಾ ಬಗ್ಗೆ ಬುಲೆಟ್ ವಿಡಿಯೋ ಮೂಲಕ ಆಕ್ರೋಶ ವ್ಯಕಲ್ತಪಡಿಸಿದ್ದಾರೆ. ದೇಶದ ಗಣ್ಯವ್ಯಕ್ತಿಗಳ ಬಗ್ಗೆ ಮಾತನಾಡುವಾಗ ಎಚ್ಚರವಹಿಸಬೇಕು. ರಾಜಕೀಯ ತಜ್ಞರ ಬಳಿ ಟ್ಯೂಷನ್ ಗೆ ಹೋಗಿ ಕಲಿತುಕೊಳ್ಳಿ. ಜನರಿಗೆ ತಪ್ಪು ಸಂದೇಶ ರವಾನೆ ಮಾಡ್ಬೇಡಿ ರಮ್ಯಾ ಮೇಡಂ ಎಂದು ತಿರುಗೇಟು ನೀಡಿದ್ದಾರೆ. ಒಂದು ರಾಜಕೀಯ ಉನ್ನತ ಹುದ್ದೆಯಲ್ಲಿದ್ದುಕೊಮಡು ರಮ್ಯಾ ಹೀಗ್ ಮಾಡೋದು ಎಷ್ಟು ಸರಿ. ನನಗೆ ರಮ್ಯಾ ಮಾಡಿದ್ದು ಸರಿಎನಿಸಲಿಲ್ಲ. ಅದಕ್ಕಾಗಿ ನಾನು ಟ್ವೀಟ್ ಮಾಡಿದ್ದೆ ಸರ್. ರಮ್ಯಾ ಅವರ ಮನಸ್ಥಿತಿ ಹೇಗಿದೆ ಅಂದರೆ, ಪಾಕಿಸ್ತಾನ ಸ್ವರ್ಗ. ಇಂತಹವರಿಂದ ನಾವು ಏನು ನಿರೀಕ್ಷೆ ಮಾಡಲು ಸಾಧ್ಯ. ಏನೂ ಮಾಡೋದಕ್ಕೆ ಆಗಲ್ಲ. ಹೀಗಾಗಿ ಇನ್ನು ಮುಂದೆಯಾದರೂ ಮೇಡಂ ಅವರು ರಾಜಕಾರಣದಲ್ಲಿ ಪ್ರೌಢತೆಯನ್ನು ಬೆಳೆಸಿಕೊಳ್ಳಲಿ. ರಾಜಕೀಯ ತಜ್ಞರ ಬಳಿ ಹೋಗಿ ಟ್ಯೂಷನ್ ತೆಗೆದುಕೊಳ್ಳಲಿ. ಹೀಗೆ ಕಲಿತರೆ ತುಂಬಾ ಸಹಾಯವಾಗುತ್ತದೆ. ಸಮಾಜಕ್ಕೂ ಹೆಲ್ಪ್ ಆಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.ಇಂತಹ ಒಬ್ಬ ವಿಶ್ವನಾಯಕನ ಬಗ್ಗೆ ಮಾತನಾಡಲು ನಿಮಗೆ ಯೋಗ್ಯತೆ, ಅರ್ಹತೆ ಹಾಗೂ ಜವಾಬ್ದಾರಿಯನ್ನು ಬಿಟ್ಟು ಹೊರಬಂದಿದ್ದೀರಿ. ಇದು ನಿಮಗೆ ಶೋಭೆ ತರುವಂತದ್ದಲ್ಲ ಎಂದು ಕಿಡಿಕಾರಿದ್ದಾರೆ.
Comments