ಹಸೆಮಣೆ ಏರಿದ ಖ್ಯಾತ ಸೀರಿಯಲ್ ನಟ..!
ಕಿರತೆರೆ ಕಲಾವಿದರೊಬ್ಬರು ಹಸೆಮಣೆ ಏರಿದ್ದಾರೆ. ಮಲೆನಾಡಿನ ಹುಡುಗಿ ನಮ್ರತಾ ಜೊತೆ ಸಪ್ತ ಪದಿ ತುಳಿದಿದ್ದಾರೆ ಸೀರಿಯಲ್ ನಟ ಮಧು ಹೆಗಡೆ. ಪಲ್ಲವಿ ಅನುಪಲ್ಲವಿ ಸೀರಿಯಲ್ ಖ್ಯಾತಿಯ ಮಧು ಹೊಸ ಬಾಳಿಗೆ ಕಾಲಿರಿಸಿದ್ದಾರೆ. ಮುಗ್ಧತೆ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಮಧು ರಿಯಲ್ ಲೈಫ್ ನಲ್ಲೂ ಅಷ್ಟೇ ಸಾಧು ತಾಳ್ಮೆ ವ್ಯಕ್ತಿತ್ವಂತೆ. ಅಂದಹಾಗೇ ಮಧು ಹೆಗಡೆಗೆ ಜೊತೆಯಾಗಿ ನಮೃತಾ ಕೂಡ ಹೆಜ್ಜೆ ಹಾಕಿದ್ದಾರೆ.
ಮಧು-ನಮ್ರತಾ ಮದುವೆಗೆ ಸೀರಿಯಲ್ ದಂಡೇ ಆಗಮಿಸಿತ್ತು. ನಟ ಅರುಣ್ ಸಾಗರ್, ವಿಕ್ರಮ್ ಸೂರಿ, ದಯಾನಂದ್ ಸಾಗರ್, ಕೃಷ್ಣ ಅಡಿಗ, ನಂದಿನಿ ಗೌಡ, ಕಿರುತೆರೆ ನಿರ್ದೇಶಕರು ಛಾಯಗ್ರಾಹಕ ಪ್ರಭಾಕರ್, ಚಿತ್ರ ನಿರ್ದೇಶಕ ಶ್ಯಾಮ್ ಶಿವಮೊಗ್ಗ , ನಮಿತಾರಾವ್ ಸೇರಿದಂತೇ ಅನೇಕ ಮಂದಿ ವಧು ವರರಿಗೆ ಹರಸಿ- ಆರ್ಶೀವಾದ ಮಾಡಿದ್ದಾರೆ.ಇನ್ನು ಮಧು ಹೆಗಡೆ ಮೂಲತಃ ಶಿವಮೊಗ್ಗದವರು, ನಮೃತಾ ಹಾಸನದ ಸಕಲೇಶಪುರದ ಲಕ್ಷ್ಮಿಪುರದ ವಾಸುದೇವ ಶರ್ಮಾರ ಮಗಳು ನಮ್ರತಾರೊಂದಿಗೆ ಮಧು ಸಪ್ತಪದಿ ತುಳಿದಿದ್ದು, ಹಾಸನದ ಶಂಕರ ಮಠದಲ್ಲಿ ಸಿಂಪಲ್ ಆಗಿ ಮದುವೆಯಾಗಿದ್ದಾರೆ.ಮಧು ಹೆಗಡೆ ಪಲ್ಲವಿ- ಅನುಪಲ್ಲವಿ, ಮನ್ವಂತರ, ಜೋಗುಳ, ಗೆಜ್ಜೆ ಪೂಜೆ ಸೇರಿದಂತೆ 50ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
Comments