ಹೊಸ ಅವತಾರದಲ್ಲಿ ಶಂಕರ್ ನಾಗ್ ಚಿತ್ರಮಂದಿರ ಮತ್ತೆ ಶುರು….

30 Apr 2019 11:07 AM | Entertainment
430 Report

ಸ್ಯಾಂಡಲ್ ವುಡ್ ಸ್ಟೈಲ್ ಕಿಂಗ್ ಎಂದರೇ ಅದು ಶಂಕರಣ್ಣ ಮಾತ್ರ. ನಟ ಶಂಕರ್ ನಾಗ್ ನಮ್ಮನ್ನು ಬಹು ಬೇಗ ಅಗಲಿದರೂ ಅವರು ಕೊಟ್ಟಂತಹ ಸಿನಿಮಾಗಳು ಮಾತ್ರ ಇಂದಿಗೂ ಅಮರ. ಅವರ ಡೈಲಾಗ್, ವಾಕಿಂಗ್ ಸ್ಟೈಲ್ ಇಂದಿಗೂ ಅವರನ್ನು ಅನಸರಿಸುವ ಅದೆಷ್ಟೋ ಮಂದಿ ಅಭಿಮಾನಿಗಳಿದ್ದಾರೆ.ಅವರು ಚಿತ್ರರಂಗದ ಮರೆಯಲಾಗದ ಮಾಣಿಕ್ಯ. .. ಎರಡು ವರ್ಷಗಳಿಂದ ಮುಚ್ಚಿದ ಶಂಕರ್ ನಾಗ್ ಚಿತ್ರ ಮಂದಿರ ಇದೀಗ ಮತ್ತೆ ಓಪನ್ ಆಗ್ತಿದೆ. ಶಂಕರಣ್ಣನ ಮುಚ್ಚಿದ ಚಿತ್ರ ಮಂದಿರ ಮತ್ತೆ ತೆರೆಯುತ್ತಿರುವುದರಿಂದ ಶಂಕರ್ ನಾಗ್ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.

1907ರಲ್ಲಿ ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಬಿಬಿಎಂಪಿ ಕಟ್ಟಡದಲ್ಲಿ ಶಂಕರ್ ನಾಗ್ ಹೆಸರಲ್ಲಿ ಚಿತ್ರಮಂದಿರ ತೆರೆಯಲಾಗಿತ್ತು. ಆದರೆ ಹಲವು ಕಾರಣಗಳಿದ್ದ 2 ವರ್ಷಗಳ ಹಿಂದೆ ಚಿತ್ರಮಂದಿರ ಕ್ಲೋಸ್ ಆಗಿತ್ತು. ಈಗ ಸ್ವಾಗತ್ ಶಂಕರ್ ನಾಗ್ ಚಿತ್ರಮಂದಿರ ಎಂಬ ಹೆಸರಿನಲ್ಲಿ ರೀ-ಓಪನ್ ಆಗಿದೆ. ಅಂದಹಾಗೇ ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ಬರುತ್ತಿದೆ. ಇದರ ಮತ್ತೊಂದು ವಿಶೇಷತೆಯೆಂದರೆ ಭಾರತದಲ್ಲೇ ಅತೀ ದೊಡ್ಡ ಡಿಜಿಟಲ್ ಎಲ್ಇಡಿ ಸ್ಕ್ರೀನ್ ಇರುವು ಚಿತ್ರಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಯಾವುದೇ ಪ್ರೋಜೆಕ್ಟರ್ ಗಳನ್ನು ಬಳಸದೇ 14 ಮೀಟರ್ ಅಗಲ, 7.2 ಮೀಟರ್ ಎತ್ತರದಲ್ಲಿ ಸ್ಕ್ರೀನ್ನ್ನು ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಅಳವಡಿಸಲಾಗಿದೆ. ಸಿಂಗಲ್ ಸ್ಕ್ರೀನ್ನಲ್ಲಿಯೇ 614 ಆಸನಗಳ ವ್ಯವಸ್ಥೆ ಸಹ ಮಾಡಲಾಗಿದೆ. ಹೀಗಾಗಿ ಸೌಂಡ್, ಪಿಚ್ಚರ್ ಕ್ವಾಲಿಟಿ ಸಹ ಅದ್ಭುತವಾಗಿ ಮೂಡಿ ಬರುತ್ತಿದೆ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Edited By

Kavya shree

Reported By

Kavya shree

Comments