ಪ್ಲೀಸ್ ರಶ್ಮಿಕಾ ಒಂದೇ ಒಂದು ರಿಪ್ಲೆ ಕೊಡು..ನಿನಗಾಗಿ ಕನ್ನಡ ಕಲಿಯುತ್ತಿದ್ದೇನೆ ಎಂದು ರಶ್ಮಿಕಾ ಹಿಂದೆ ಬಿದ್ದಿರೋದು ಯಾರ್ ಗೊತ್ತಾ..?

ಸ್ಯಾಂಡಲ್ ವುಡ್ ನಲ್ಲಿ ಕಡಿಮೆ ಅವದಧಿಯಲ್ಲಿ ಹೆಚ್ಚು ಹೆಸರು ಮಾಡಿದ್ದು ಅಂದರೆ ಅದು ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ.. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಾನ್ವಿಯಾಗಿ ಎಂಟ್ರಿ ಕೊಟ್ಟ ಈಕೆ ಟಾಲಿವುಡ್ ಕಾಲಿವುಡ್ ಇದೀಗ ಬಾಲಿವುಡ್ ನಲ್ಲಿಯೂ ಮಿಂಚುವುದಕ್ಕೆ ರೆಡಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಗೆ ಕೇವಲ ಕನ್ನಡದಲ್ಲಿ ಮಾತ್ರ ಕ್ರಶ್ ಗಳಿಲ್ಲ… ಆಂದ್ರ-ತೆಲಂಗಾಣದಲ್ಲೂ ಕ್ರಶ್ಗಳು ಇದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ..
ಕನ್ನಡ ಮತ್ತು ತೆಲುಗಿನಲ್ಲಿ ಮೋಡಿ ಮಾಡುತ್ತಿರುವ ರಶ್ಮಿಕಾ ಮಂದಣ್ಣಗೆ ತಮಿಳಿನಲ್ಲೂ ಕೂಡ ಅಭಿಮಾನಿಗಳಿದ್ದಾರೆ. ಇಲ್ಲಿಯವರೆಗೂ ಯಾವುದೇ ತಮಿಳು ಚಿತ್ರದಲ್ಲಿಯೂ ಕೂಡ ಅಭಿನಯಿಸಿಲ್ಲ.. ಆದರೂ ಈಕೆಗೆ ತಮಿಳಿನಲ್ಲಿಯೂ ಕೂಡ ಅಭಿಮಾನಿಗಳು ಇದ್ದಾರೆ. ಇದೀಗ ತಮಿಳು ಅಭಿಮಾನಿಯೊಬ್ಬ ರಶ್ಮಿಕಾ ಬೆನ್ನು ಬಿದ್ದಿದ್ದಾನೆ… ಒಂದೇ ಒಂದು ರಿಪ್ಲೆ ಕೊಡಿ ಪ್ಲೀಸ್ ಎಂದು ಅಂಗಲಾಚುತ್ತಿದ್ದಾನೆ. ಟ್ವಿಟ್ಟರ್ ನಲ್ಲಿ ಹದಿನೈದು ದಿನದಿಂದ ಅಭಿಮಾನಿಯ ಗೋಳು ಕೇಳುವವರೇ ಇಲ್ಲ ಎನ್ನುವಂತಾಗಿದೆ. ಅಷ್ಟೆ ಅಲ್ಲದೆ ಕನ್ನಡದ ಈ ನಟಿಗಾಗಿ ತಮಿಳು ಅಭಿಮಾನಿ ಕನ್ನಡವನ್ನು ಕಲಿಯುತ್ತಿದ್ದಾನಂತೆ.. ಅನಿಶ್ ಎಂಬ ತಮಿಳು ಅಭಿಮಾನಿ ರಶ್ಮಿಕಾ ಮಂದಣ್ಣ ಹಿಂದೆ ಬಿದ್ದಿದ್ದಾನೆ. ಈ ಯುವಕನಿಗೆ ರಶ್ಮಿಕಾ ಅಂದ್ರೆ ತುಂಬಾ ಇಷ್ಟವಂತೆ. ರಶ್ಮಿಕಾ ಅವರೇ ಒಂದು ರಿಪ್ಲೇ ಕೊಡಿ ಎಂದು ಕಾದು ಕುಳಿತಿದ್ದಾನೆ. ರಶ್ಮಿಕಾ ನೀನು ಬರುವವರೆಗೂ ಕೂಡ ನಾನು ಕಾಯುತ್ತಿರುತ್ತೇನೆ ಎಂದು ಟ್ವೀಟ್ ಮಾಡಿದ್ದಾನೆ.. ರಶ್ಮಿಕಾ ಇದಕ್ಕೆ ರಿಪ್ಲೆ ಮಾಡುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.
Comments